ದಿವಿಜಿ ಸುದ್ದಿ, ದಾವಣಗೆರೆ: ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಸಾಕಷ್ಟು ಹಗರಣಗಳಿವೆ. ಸಚಿವ ಆನಂದ್ ಸಿಂಗ್ ಬಗ್ಗೆ ಮಾತನಾಡಲು ಕಾಂಗ್ರೆಸ್ , ಜೆಡಿಎಸ್ ಪಕ್ಷದವರೇನು ಸತ್ಯಹರಿಶ್ಚಂದ್ರರಾ..? ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಪ್ರಶ್ನಿಸಿದಿರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಕಾಂಗ್ರೆಸ್ ಸೇರಿಸಿಕೊಂಡಾಗ ಅವರ ಮೇಲೆ ಆರೋಪ ಇರಲಿಲ್ಲವೇ..? ಎಸಿಬಿ ರಚನೆ ಮಾಡಿ ತಮ್ಮ ಮೇಲಿನ ಕೇಸ್ ಗಳನ್ನು ಕ್ಲೀನ್ ಚಿಟ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿಯಿಂದ ಸಚಿವರಾಗಿದ್ದಕ್ಕೆ ಅಸೂಯೆಯಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆನಂದ್ ಸಿಂಗ್ ಅರಣ್ಯ ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.
ಈಗಿನ ಕೈ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷ ಎಂದುಕೊಂಡಿದ್ದಾರೆ. ಆ ಪಕ್ಷ ಬೇರೆ, ಇಗಿರುವ ಪಕ್ಷನೇ ಬೇರೆ. ಇವರೆಲ್ಲ ಮೀಡಿಯಾದವರ ಮುಂದೆ ಬಾವುಟ ತೆಗೆಯುತ್ತಾರೆ. ಅವರು ಹೋದ ಮೇಲೆ ಮಡಚಿಕೊಂಡು ಇಟ್ಟಿಕೊಳ್ಳುತ್ತಾರೆ. ಕಾಂಗ್ರೆಸ್ಸಿನವರು ಒಂದು ರೀತಿ ಎಂಟಿಆರ್ ರೆಡಿ ಫುಡ್ ಇದ್ದಂತೆ. ಪ್ರತಿಭಟನೆ ಮಾಡುವುದು ಅವರಿಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಶಾಸಕ ಉಮೇಶ್ ಕತ್ತಿಯವರು ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೋಗಲಿ ಬಿಡಿ ಕತ್ತಿಯವರು ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಹೋಗಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರನ್ನು ಭೇಟಿ ಮಾಡಲು ಹೋಗಿಲ್ಲವಲ್ಲ. ಹಿರಿಯ ನಾಯಕರಿದ್ದಾರೆ, ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ ಎಂದರು.
.