ದಾವಣಗೆರೆ: ಅತಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಮನೆ ಒಳ ನುಗ್ಗಿದೆ. ಇದರಿಂದ ಮನೆಯಲ್ಲಿ ಮಲಗಿದ್ದ ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಕುಕ್ಕವಾಡ ಗ್ರಾಮದಲ್ಲಿ ನಡೆದಿದೆ.
ನಿನ್ನೆ (09) ತಡರಾತ್ರಿ ಈ ಘಟನೆ ನಡೆದಿದೆ. ಕುಕ್ಕವಾಡ ಗ್ರಾಮದ ಸುನಂದಮ್ಮ ಗಾಯಗೊಂಡ ಮಹಿಳೆಯಾಗಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೂ ಸಹ ಗಾಯಗಳಾಗಿವೆ.
ತ್ಯಾವಣಿಗೆ ಕಡೆಯಿಂದ ಅತಿ ವೇಗವಾಗಿ ಬಂದ ಕಾರು, ಕುಕ್ಕವಾಡ ಗ್ರಾಮದ ವೃತ್ತದಲ್ಲಿದ್ದ ಪಿಲ್ಲರ್ಗೆ ಡಿಕ್ಕಿಯಾಗಿ ಪಕ್ಕದಲ್ಲಿಯೇ ಇದ್ದ ಕಾಂಪೌಂಡ್ ಮುರಿದು ಮನೆ ಒಳ ನುಗ್ಗಿದೆ. ಮನೆ ರೂಮ್ ನಲ್ಲಿ ಮಲಗಿದ್ದ ಮಹಿಳೆಯ ಮೇಲೆ ಇಟ್ಟಿಗೆ ಬಿದ್ದು ಗಾಯವಾಗಿವೆ. ಈ ಬಗ್ಗೆ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



