ದಾವಣಗೆರೆ: ಸೆಂಟ್ರಿಂಗ್ ಸಾಮಾನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 8 ಲಕ್ಷ ಬೆಲೆಯ ಸ್ವತ್ತು, ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಮುದ್ದೇಬಿಹಾಳ ಶಿವಕುಮಾರ್ ಅವರು, ನೈರುತ್ಯ ರೈಲ್ವೆಯ ದಾವಣಗೆರೆ ತೋಳು ಹುಣಸೆ ಯಿಂದ ತುಮಕೂರು ವರೆಗೆ ನಡೆಯುತ್ತಿರುವ ಹೊಸ ರೈಲ್ವೆ ಕಾಮಗಾರಿಯಲ್ಲಿ ರೈಲ್ವೆ ಟ್ರಾಕ್ ನ ಎರೆಡೂ ಬದಿಯಲ್ಲಿ ಕಾಂಕ್ರಿಟ್ ಚರಂಡಿ ಮಾಡುವ ಗುತ್ತಿಗೆಯನ್ನು ತೆಗೆದುಕೊಂಡಿದ್ದು, ಹೆಬ್ಬಾಳು ಬಡಾವಣೆ ಗ್ರಾಮದ ಹಿಂಭಾಗದಲ್ಲಿ ರೈಲ್ವೆ ಟ್ರಾಕ್ ಬಳಿ ಕಾಂಕ್ರೀಟ್ ಚರಂಡಿ ಮಾಡಲು ಅಳವಡಿಸಿದ್ದ ಕಬ್ಬಿಣದ 48 ಸೆಂಟರಿಂಗ್ ಮೋಲ್ಡ್ ಪ್ಲೇಟ್ಸ್ ಗಳನ್ನು ಹಾಗೂ 24 ಹ್ಯಾಂಗ್ಲರ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಡಿಕೊಡಲು ಕೋರಿ ದೂರು ನೀಡಿದ್ದರು.
ಇತ್ತೊಂದು ಪ್ರಕರಣದಲ್ಲಿ ಕಾಡಜ್ಜಿ ಗ್ರಾಮದ ಮಹ್ಮಮದ್ ಕರೂರು ಬಳಿ ಇರುವ ದೊಡ್ಡಬಾತಿ ರಿ. ಸರ್ವೇ ನಂ: 96 ರಲ್ಲಿನ ಜಮೀನಲ್ಲಿ ಹೊಸದಾಗಿ ಲೇ ಔಟ್ ನಿರ್ಮಾಣ ಮಾಡುತ್ತಿದ್ದು, ಲೇ ಔಟ್ ನಲ್ಲಿ ಕಾಂಕ್ರಿಟ್ ಚರಂಡಿಯನ್ನು ಮಾಡಲು ಕಬ್ಬಿಣದ 08 ಅಡಿ ಉದ್ದದ 02 ಅಡಿ ಅಗಲದ ಸೆಂಟ್ರಿಂಗ್ ಪ್ಲೇಟ್ ಗಳನ್ನು ಅಳವಡಿಸಿದ್ದರು. ಯಾರೋ ಕಳ್ಳರು ಒಟ್ಟು 66 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳರನ್ನು ಪತ್ತೆ ಮಾಡಿಕೊಡಲು ಪ್ರಕರಣ ದಾಖಲಿಸಿದ್ದರು.
ಈ ಎರಡು ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಮಾಲು ಪತ್ತೆ ಸಲುವಾಗಿ ಎಎಸ್ಪಿ ವಿಜಯ್ ಕುಮಾರ್ ಸಂತೋಷ್ ಹಾಗೂ ಮಂಜುನಾಥ ರವರ ಮತ್ತು ಡಿವೈಎಸ್ಪಿ ಬಸವರಾಜ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್ ಇ.ವೈ ನೇತೃತ್ವದಲ್ಲಿ ಪಿಎಸ್‌ಐ ಜೋವಿತ್ ರಾಜ್ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ಪ್ರಕಣದ ಆರೋಪಿ ಹಾಗೂ ಸ್ವತ್ತಿನ ಪತ್ತೆ ಕಾರ್ಯಚರಣೆ ನಡೆಸಿದ್ದು, ಮೇಲ್ಕಂಡ ಪ್ರಕರಣಗಳಲ್ಲಿನ ಆರೋಪಿಗಖಾದ 1)ದಿನೇಶ್ ನಾಯ್ಕ @ ಕಾಳು, (26) ತೋಳುಹುಣಸೆ ಗ್ರಾಮ, ದಾವಣಗೆರೆ ತಾಲ್ಲೂಕು. 2)ಶಿವು@ಶಿವುನಾಯ್ಕ, (36) ತೋಳುಹುಣಸೆ ಗ್ರಾಮ, ದಾವಣಗೆರೆ ತಾಲ್ಲೂಕು. 3) ಇಸ್ಮಾಯಿಲ್ ಜಬೀಉಲ್ಲಾ @ ಇಸ್ಸು, (31) ವಾಸ:ಬೀಡಿ ಲೇ ಔಟ್, ದಾವಣಗೆರೆ ನಗರ. ಇವರುಗಳನ್ನು ಪತ್ತೆಮಾಡಿ ತನಿಖೆ ಕೈಗೊಳ್ಳಾಗಿತ್ತು.
ಆರೋಪಿಗಳಿಂದ ಎರಡು ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ಮಾಲಿಗೆ ಸಂಬಂಧಿಸಿದಂತೆ 3,50,000/-ರೂ ಮೌಲ್ಯದ ಸ್ವತ್ತನ್ನು ಹಾಗೂ ದಾವಣಗೆರೆ ನಗರದ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ ಸರಹದ್ದಿನಲ್ಲಿ ಕಳ್ಳತನವಾಗಿದ್ದ ಸುಮಾರು 1,50,000/- ರೂ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಹಾಗೂ ಆಂಗ್ಲರ್ ಗಳನ್ನು ಹಾಗೂ ಆರೋಪಿತರು ಕೃತ್ಯಕ್ಕೆ ಬಳಸಿದ್ದ 3,00,000/- ರೂ ಬೆಲೆಯ ಒಂದು ಟಾಟಾ ಏಸ್ ಹಾಗೂ ಒಂದು ಪ್ಯಾಸೆಂಜರ್ ಆಟೋವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಕೃತ್ಯದಲ್ಲಿ ಬಾಗಿಯಾಗಿದ್ದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿದೆ.
ಈ ಎರಡು ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡಿ ಅಂದಾಜು 8,00,000/- ರೂ ಮೌಲ್ಯದ ಕಳವು ಸ್ವತ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ಅಮಾನತ್ತುಪಡಿಸಿಕೊಂಡಿದ್ದು ಆರೋಪಿತರಿಂದ 03 ಪ್ರಕರಣಗಳು ಪತ್ತೆಯಾಗಿದ್ದು ಆರೋಪಿತರನ್ನು ನ್ಯಾಯಾಂಗ ಬಂಧನದಲ್ಲಿರಿಸುವಲ್ಲಿ ದಾವಣಗೆರೆ ಗ್ರಾಮಾಂತರ ಪೊಲಿಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣಗಳಲ್ಲಿನ ಸ್ವತ್ತು ಮತ್ತು ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಮೇಲ್ಕಂಡ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ ನಾಗಭೂಷಣ, ಮಹಮ್ಮದ್ ಯುಸುಪ್ ಅತ್ತರ, ವೀರೇಶ್ ಪಿ.ಎಂ ಅವರನ್ನು ಎಸ್ಪಿ ಉಮಾ ಪ್ರಶಾಂತ ಪ್ರಶಂಸಿದ್ದಾರೆ.