ಡಿವಿಜಿ ಸುದ್ದಿ, ಚನ್ನಗಿರಿ: ತಾಲ್ಲೂಕಿನ ಹಿರೇ ಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಹಿರಿಯ ನ್ಯಾಯವಾದಿ, ಸಾಹಿತಿ ಡಾ. ರೇವಣ್ಣ ಬಳ್ಳಾರಿ ಅವರಿಗೆ ‘ಶ್ರೀ ಕೇದಾರೇಶ್ವರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೇವಣ್ಣ ಬಳ್ಳಾರಿ ಅವರಿಗೆ ‘ಡಾಕ್ಟರ್ ಆಫ್ ರಿಲೀಜಿಯಸ್ ಅಂಡ್ ಲಿಟ್ರೇಚರ್ ಗೌರವ ನೀಡಿದ ಹಿನ್ನೆಲೆಯಲ್ಲಿ ಶ್ರೀ ಮಠದಿಂದ ಜಿಲ್ಲಾ ಮಟ್ಟದ ಬೆಳದಿಂಗಳ ಕವಿಗೋಷ್ಠಿ ಸಮಾರಂಭದಲ್ಲಿ ಶ್ರೀ ಕೇದಾರೇಶ್ವರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರೇ ಮಠದ ಶಿವಶಾಂತವೀರ ಸ್ವಾಮಿಗಳ 10 ನೇ ವರ್ಷದ ಪಟ್ಟಾಭಿಷೇಕ ಅಂಗವಾಗಿ ಬೆಳದಿಂಗಳ ಕವಿಗೋಷ್ಠಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೇವಣ್ಣ ಬಳ್ಳಾರಿ, ಸಮಾಜ ತಿದ್ದ ಕೆಲಸವನ್ನು ಸಾಹಿತಿಗಳು ಮಾಡಬೇಕು. ಹೀಗಾಗಿ ಸಾಹಿತಿಗಳಿಗೆ ಇರುವ ಬೆಲೆ ವಿಶೇಷವಾದದ್ದು, ಕನ್ನಡ ಅನ್ನ ನೀಡುವ ಭಾಷೆ ಆಗಬೇಕಾದರೆ ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ತಹಶಿಲ್ದಾರಾದ ನಾಗರಾಜ, ಓ.ಎಸ್.ಬಸವರಾಜ್, ಅಣೋಣಜಿ ರಾವ್, ಶಂಕರ್, ಜೋತಿ ಕೋರಿ, ಎಂ.ಪಿ.ಗುರು ಕನ್ನಡ ಕಟ್ಟಾಳು ಡಾ. ಚಿದಾನಂದ ಮೂರ್ತಿರವರನ್ನು ಅವರ ಹೋರಾಟದ ಬಗ್ಗೆ ಸ್ಮರಸಿದರು . ಡಿ.ಬಿ.ನಾಯಕ್, ಜಯಪ್ರಕಾಶ್, ಚಂದ್ರಿಕಾ ಜಗನ್ನಾಥ, ಮುರುಳಿಧರ್, ಪ್ರಭಾಕರ್ ಹೊದಿಗೆರೆ ಜೊತೆ 25ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು.



