ದಾವಣಗೆರೆ: ಐಗೂರು ಗೊಲ್ಲರಹಟ್ಟಿ ಬಳಿಯ ಜೀವನ್ ಡಾಬಾದ ಬಳಿ ಯುವಕರ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ನ.27 ರಂದು ದಾವಣಗೆರೆ ತಾಲ್ಲೂಕಿನ ಕಾಟೇಹಳ್ಳಿ ತಾಂಡದ ದಾದಪೀರ್ ಮತ್ತು ಅಹಮದ್ ಎಂಬುವರ ಮೇಲೆ ಹಲ್ಲೆ ನಡೆದಿತ್ತು. ತರಗಾರ ಕೆಲಸ ಮುಗಿಸಿಕೊಂಡು ರಾತ್ರಿ ಐಗೂರು ಗೊಲ್ಲರಹಟ್ಟಿ ಬಳಿಯ ಜೀವನ್ ಡಾಬಾದಲ್ಲಿ ಊಟ ಮಾಡಿ ಬೈಕ್ ಬಳಿ ನಿಂತಿದ್ದರು. ಪಲ್ಸರ್ ಬೈಕ್ ನಲ್ಲಿ ಬಂದ ಮೂವರು ಹಲ್ಲೆ ಮಾಡಿ, ಹೆದರಿಸಿ 2 ಬೆಳ್ಳಿಯ ಉಂಗುರಗಳನ್ನು ಜೇಬಿನಲ್ಲಿದ್ದ 2000/- ರೂ ನಗದು ಹಣ ಹಾಗೂ ರಿಯಲ್ ಮಿ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು.
ಯುವಕರು ಕೂಡಲೇ ಸ್ಥಳೀಯರ ಸಹಾದಿಂದ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿದ್ದು, ಘಟನಾ ಸ್ಥಳಕಕ್ಕೆ ಗಮಿಸಿದ 112 ಅಧಿಕಾರಿಗಳು ಘಟನೆ ಬಗ್ಗೆ ವಿವರ ಪಡೆದು ಅವರಿಗೆ ಠಾಣೆಗೆ ದೂರು ನೀಡಲು ತಿಳಿಸಿದರು. 112 ಹೊಯ್ಸಳ ಗಸ್ತು ಮಾಡುತ್ತಿರುವಾಗ ದೂರು ನೀಡಿದ ಬೈಕಿನ ವಿವರಕ್ಕೆ ಹೋಲುವಂತಹ ಬೈಕ್ ಬಸಾಪುರ ಮಾರ್ಗದಲ್ಲಿ ಹೋಗುತ್ತಿದ್ದು
ಅನುಮಾನ ಬಂದು, 112 ಪೊಲೀಸರು ಕೂಡಲೇ ಹಿಡಿಯಲು ಬೆನ್ನು ಹತ್ತಿದು, ಪೊಲೀಸರನ್ನು ಕಂಡು ಪಲ್ಸರ್ ಬೈಕಿನಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ. ಸುಮಾರು 8 ಕಿಮೀ ದೂರ ಆರೋಪಿತರನ್ನು ಬೆನ್ನತ್ತಿದ್ದು ಆರ್ ಎಂ ಸಿ ಠಾಣಾ ವ್ಯಾಪ್ತಿಯ ಗಾಣಗಿತ್ತಿ ಮಾಯಮ್ಮ ದೇವಾಸನದ ಸಮೀಪದಲ್ಲಿ ಆರೋಪಿಗಳನ್ನು ಹಿಡಯಲಾಗಿದೆ.
ವಿಚಾರಣೆ ನಂತರ ಸುಲಿಗೆ ಮಾಡಿರುವುದು ಖಚಿತಪಡಿಸಿದ ಆರೋಪಿ 1) ತರುಣ್ ಮತ್ತು 2) ಸಿಕಂದರ್, ದಾವಣಗೆರೆ ವಾಸಿಗಳು ಹಾಗೂ 3) ಪ್ರಶಾಂತ್, ಐಗೂರು ವಾಸಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಲಿಗೆ ಮಾಡಿದ 01 ರಿಯಲ್ ಮಿ ಮೊಬೈಲ್, 2000 ನಗದು ಹಣ, 01 ಬೆಳ್ಳಿ, ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ.
112ಕ್ಕೆ ದೂರು ಬಂದ ಕೆಲವೇ ಗಂಟೆಗಳಲ್ಲಿ,
ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಹೊಯ್ಸಳ 07ರಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಸಣ್ಣನಾಗೇಂದ್ರಪ್ಪ , ಪೊಲೀಸ್ ಕಾನ್ಸ್ ಟೆಬಲ್ ವಿರೇಶ್ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಎಸ್ಪಿ ವಿಜಯಕುಮಾರ ಎಂ ಸಂತೋಷ್, ಜಿ ಮಂಜುನಾಥ, ಡಿವೈಎಸ್ಪಿ ಸ್ಪ್ಯಾಮ್ ವರ್ಗೀಸ್, ಬಸವರಾಜ್ ಬಿ ಎಸ್ ಶ್ಲಾಘಿಸಿದ್ದಾರೆ.



