ಡಿವಜಿ ಸುದ್ದಿ, ತುಮಕೂರು: ಅಧಿಕಾರದ ದರ್ಪ, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದೇ ಕರ್ತವ್ಯ ಲೋಪ ಎಸಗಿದ ಪಿಎಸ್ ಐ ಅಮಾನತ್ತು ಮಾಡಿದ್ದನ್ನು ಸಂಭ್ರಮಿಸಿದ ಸಾರ್ವಜನಿಕರು ಪಾಟಾಕಿ ಸಿಡಿಸಿ ಸಹಿ ಹಂಚಿದರು.
ಪಾವಗಡ-ತುಮಕೂರು ಪಟ್ಟಣ ಠಾಣೆಯ ಪಿಎಸ್‍ಐ ರಾಘವೇಂದ್ರ ಅರನ್ನು ಕರ್ತವ್ಯ ಲೋಪ ಎಸಗಿದ್ದರೆಂದು ಅಮಾನತ್ತುಗೊಳಿಸಲಾಗಿದೆ. ಇದರಿಂದ ಕಳೆದ 8 ತಿಂಗಳಿಂದ ರೋಸಿ ಹೋಗಿದ್ದ ಸಾರ್ವಜನಿಕರುಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಪಟ್ಟಣದ ಶನೇಶ್ವರ ದೇವಸ್ಥಾನ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸೇರಿದ ಸಾರ್ವಜನಿಕರು ಪಟಾಕಿ ಸಿಡಿಸಿ ಎಸ್‍ಪಿಗೆ ಜೈಕಾರ ಕೂಗಿ, ರಾಘವೇಂದ್ರಗೆ ಧಿಕ್ಕಾರ ಕೂಗಿದ್ದಾರೆ. ಕಳೆದ 8 ತಿಂಗಳಿನಿಂದ ಪಾವಗಡ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಸಾರ್ವಜನಿಕರ ಜೊತೆ ಅಧಿಕಾರ ದರ್ಪದಿಂದ ನಡೆದುಕೊಳ್ಳುವುದು, ದೂರುದಾರರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿತ್ತು.ಪೊಲೀಸ್ ಅಧಿಕಾರಿಯ ಈ ದರ್ಪದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಪಿಎಸ್‍ಐ ರಾಘವೇಂದ್ರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಅಮಾನತುಗೊಳಿಸಿದ್ದಾರೆ. ಭ್ರಷ್ಟ ಅಧಿಕಾರಿ ವಿರುದ್ಧ ಖಡಕ್ ತೀರ್ಮಾನ ತೆಗೆದುಕೊಂಡು ಜಿಲ್ಲಾಧಿಕಾರಿಗಳಿಗೆ ಜೈಕಾರ ಕೂಗಿದ್ದಾರೆ.
ಪಾವಗಡ ಪಟ್ಟಣ ಠಾಣೆಯ ಪಿಎಸ್‍ಐ ರಾಘವೇಂದ್ರ ಅವರು ಕರ್ತವ್ಯ ಲೋಪ ಎಸಗಿರುವುದು ಸಾಬೀತಾದಿದೆ. ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಸುಮಾರು ನಾಲ್ಕು ಪ್ರಕರಣಗಳಲ್ಲಿ ದೂರು ದಾಖಲಿಸಿಕೊಳ್ಳದೇ ಅರ್ಜಿದಾರರಿಗೆ ಮೋಸ ಮಾಡುವ ಹುನ್ನಾರ ನಡೆಸಿದ್ದರು ಎನ್ನಲಾಹಗುತ್ತಿದೆ.



