ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಲಂಚ ಮಿತಿಮೀರಿದೆ. ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ವಿದ್ದು, ಸಾಮಾನ್ಯ ಜನಕ್ಕೆ ತಿಂಗಳಾದರೂ ಇ-ಸ್ವತ್ತು ಸಿಗಲ್ಲ. ಆದರೆ, ಮಧ್ಯವರ್ತಿಗಳ ಮೂಲಕ ಲಂಚ ಕೊಟ್ರೇ ಒಂದೇ ದಿನದಲ್ಲಿ ಇ-ಸ್ವತ್ತು ಸಿಗುತ್ತದೆ ಎಂದು ಆಡಳಿತ ಕಾಂಗ್ರೆಸ್ ಪಕ್ಷ ಸದಸ್ಯರು ಕಿಡಿಕಾರಿದರು.
ಒಂದೇ ದಿನದಲ್ಲಿ ಇ-ಸ್ವತ್ತು: ಪಾಲಿಕೆ ಸಮಾನ್ಯ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಸುರಭಿ ಶಿವಮೂರ್ತಿ, ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ನಡೆಯುತ್ತಿದೆ. ಇ-ಸ್ವತ್ತು ಕೊಡಲು ಸಾವಿರಾರು ರೂಪಾಯಿ ಲಂಚ ಕೇಳಲಾಗುತ್ತಿದೆ. ಸಾಮಾನ್ಯ ಜನಕ್ಕೆ ತಿಂಗಳಾದರೂ ಇ-ಸ್ವತ್ತು ಸಿಗುತ್ತಿಲ್ಲ. ಆದರೆ, ಕೆಲ ಮಧ್ಯವರ್ತಿಗಳು ಲಂಚ ಪಡೆದು ಒಂದೇ ದಿನದಲ್ಲಿ ಇ-ಸ್ವತ್ತು ಕೊಡಿಸುತ್ತಾರೆ ಆರೋಪಿಸಿದರು.
ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ: ಈ ಆರೋಪಕ್ಕೆ ಸಭೆಯಲ್ಲಿದ್ದ ಇನ್ನೊಬ್ಬ ಕಾಂಗ್ರೆಸ್ ಸದಸ್ಯ ಉದಯ ಕುಮಾರ್ ಧ್ವನಿಗೂಡಿಸಿದರು. ಮಧ್ಯವರ್ತಿಗಳ ಹಾವಳಿಯ ದಾಖಲೆ ಪ್ರದರ್ಶನ ಮಾಡಿದರು. ಕೂಡಲೇ ಇಂತಹ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ, ಪಾಲಿಕೆಯಲನ್ನು ಮಧ್ಯವರ್ತಿ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.



