ದಾವಣಗೆರೆ: ಮ್ಯಾಟ್ರಿಮನಿ ಮೂಲಕ ಯುವತಿಯರಿಗೆ ಪರಿಚಯ; ಮದುವೆ, ಸರ್ಕಾರಿ ಕೆಲಸದ ಆಮಿಷ-8 ಪ್ರಕರಣದಲ್ಲಿ 62.83 ಲಕ್ಷ ವಂಚನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ: ಮ್ಯಾಟ್ರಿಮನಿಗಳ (Matrimony) ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು , ಮದುವೆ ಹಾಗೂ ನೌಕರಿ ಕೆಲಸ ಕೊಡಿಸುವ ಆಮಿಷ ತೋರಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿ ವಿವಿಧ ಕಡೆಗಳಲ್ಲಿ 8 ಪ್ರಕರಣಗಳಲ್ಲಿ ಒಟ್ಟು 62,83,600/- ರೂ ವಂಚನೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ ಆಪ್ ನಲ್ಲಿ ಅಪರಿಚಿತ  ಮಧು ಎಂ ಮಹಾದೇವಪ್ಪ ಎಂಬ ವ್ಯಕ್ತಿ ಮೊಬೈಲ್ ನಂಬರ್ ‌ಪಡೆದು, ವಾಟ್ಸಪ್ ಮೂಲಕ ಮೆಸೆಜ್ ಮಾಡಿ ನನಗೆ ನಿಮ್ಮ ಪ್ರೋಫೈಲ್ ಇಷ್ಟವಾಗಿದ್ದು ನಾನು ನಿಮ್ಮನ್ನು ಮದುವೆ ಆಗಲು ಒಪ್ಪಿರುತ್ತೇನೆ ಎಂದು ಯುವತಿಗೆ ಮೇಸೆಜ್ ಮಾಡಿದ್ದಾನೆ. ಪ್ರತಿ ದಿನ ವಿವಿಧ ಮೊಬೈಲ್ ನಂಬರ್ ಗಳಿಂದ ವಾಟ್ಸಪ್ ಮಾಡುತ್ತಾ ಹಾಗೂ ಕಾಲ್ ಮಾಡಿ ಮಾತನಾಡುತ್ತಿರುತ್ತಾರೆ. ನಂತರ ವಿಧ್ಯಾಭ್ಯಾಸದ ಬಗ್ಗೆ ವಿಚಾರಿಸಿ ಮೈಸೂರು ನಗರದ ಆರ್ ಆರ್ ಬಿ ರೈಲ್ವೆ ಇಲಾಖೆಯಲ್ಲಿ Clerical Post ಗಳು ಖಾಲಿ ಇದ್ದು, ನಾನು ರೈಲ್ವೆ ಇಲಾಖೆಯ ವರ್ಕಶಾಫ್ ನಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು , ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಿವಿಧ ದಿನಾಂಕಗಳಂದು ಹಂತ ಹಂತವಾಗಿ ಒಟ್ಟು 21,03,600/- ಹಣವನ್ನು ಆನ್ ಲೈನ್ ಮೂಲಕ ಹಾಕಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ಆರೋಪಿತನ ಪತ್ತೆಗಾಗಿ ಎಎಸ್ಪಿ ವಿಜಯಕುಮಾರ ಎಂ ಸಂತೋಷ & ಜಿ ಮಂಜುನಾಥ ಹಾಗೂ ಡಿವೈಎಸ್ಪಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಲಕ್ಷ್ಮಣ್ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿಯವರಾದ ಗೋವಿಂದರಾಜ್, ಅಶೋಕ, ಜಿಲ್ಲಾ ಪೊಲೀಸ್ ಕಚೆರಿಯಯ ರಾಮಚಂದ್ರ ಜಾಧವ್, ರಾಘವೇಂದ್ರ ಅವರನ್ನೊಳಗೊಂಡ ತಂಡ ಆರೋಪಿತ ಮಾಧು @ ಮಧು ಎಂ ( 31) ವಾಸ:ಮಾಚಹಳ್ಳಿ ಗ್ರಾಮ ಮಂಡ್ಯ ತಾಲೂಕ್ ಮಂಡ್ಯ ಜಿಲ್ಲೆ, ಈತನನ್ನು ಬಂಧಿಸಿದ್ದಾರೆ.

ಆರೋಪಿತನಿಂದ 1 ಮೊಬೈಲ್ ವಶಪಡಿಸಿಕೊಂಡಿರುತ್ತದೆ. ನಂತರ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರೆಸಲಾಗುವುದು. ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು 4,01,463/- ರೂಗಳನ್ನು ದೂರುದಾರರಿಗೆ ಮರುಪಾವತಿ ಮಾಡಿಸಲಾಗಿದೆ. ಇದಲ್ಲದೆ ಇದೇ ರೀತಿ Matrimony ವಿಚಾರವಾಗಿ ಹೆಣ್ಣು ಮಕ್ಕಳಿಗೆ ನಂಬಿಸಿ ಮೋಸ ಮಾಡಿದ ವಿವಿದ ಪ್ರಕರಣಗಳು ದಾಖಲಾಗಿವೆ.

ಮದುವೆ ಆಗುವುದಾಗಿ ವಂಚನೆ 

  • ಚಿಕ್ಕ ಮಗಳೂರು ಪೊಲೀಸ್ ಠಾಣೆ ಪ್ರಕರಣದಲ್ಲಿ-3,80,000/- ರೂ
  • ಮಂಡ್ಯ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿನ ಪ್ರಕರಣದಲ್ಲಿ -26,00,000/- ರೂ
  • ದಾವಣಗೆರೆ ಸಿಇಎನ್ ಪೊಲೀಸ್ ಠಾಣೆ ಪ್ರಕರಣದಲ್ಲಿ -21,03600/- ರೂ

ನೌಕರಿ ಕೊಡಿಸುವುದಾಗಿ ನಂಬಿಸಿ ವಂಚನೆ

  • ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ಪ್ರಕರಣದಲ್ಲಿ -1,50,000/- ರೂ
  • ಹರಿಹರ ನಗರ ಪೊಲೀಸ್ ಠಾಣೆ- ಸಿ ಆರ್ ನಂ 142-20219 ಪ್ರಕರಣದಲ್ಲಿ-1,30,000/- ರೂ
  • ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ಪ್ರಕರಣದಲ್ಲಿ – 2,80,000/-ರೂ
  • ಮೈಸೂರು ಸಿಇಎನ್ ಪೊಲೀಸ್ ಠಾಣೆ 35/2021 ಪ್ರಕರಣದಲ್ಲಿ -90,000/ರೂ
  • ಕೆ ಆರ್ ನಗರ ಪೊಲೀಸ್ ಠಾಣೆ ಪ್ರಕರಣದಲ್ಲಿ – 5,50,000/-ರೂ

ಈಗೆ ಆರೋಪಿತನು ವಿವಿಧ ಕಡೆಗಳಲ್ಲಿ 8 ಪ್ರಕರಣಗಳಲ್ಲಿ ಒಟ್ಟು 62,83,600/- ರೂ ವಂಚನೆ ಮಾಡಿರುತ್ತೇನೆ. ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಎಸ್ಪಿ ಉಮಾ ಪ್ರಶಾಂತ್ ಐಪಿಎಸ್ ರವರು ರವರುಗಳು ಪ್ರಶ೦ಸನೆ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಗಮನಕ್ಕೆ: Matrimony ಗಳ ಮೂಲಕ ವಂಚಕರು ಪರಿಚಯ ಮಾಡಿಕೊಂಡು ಹೆಣ್ಣು ಮಕ್ಕಳಿಗೆ ನಯವಾಗಿ ಮಾತನಾಡಿ ವಂಚಿಸುವವರ ಬಗ್ಗೆ ಹಾಗೂ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುವವರ ಬಗ್ಗೆ ಜಾಗೃತರಾಗಿರಿ. ಇಂತಹ ಘಟನೆಗಳು ಕಂಡುಬಂದರೆ ಕೂಡಲೇ ಸ್ಥಳೀಯ ಠಾಣೆಗೆ ಹೋಗಿ ದೂರು ನೀಡಲು ಈ ಮೂಲಕ ಜಿಲ್ಲಾ ಪೊಲೀಸ್ ವತಿಯಿಂದ ತಿಳಿಸಲಾಗಿದೆ

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *