ಡಿವಿಜಿ ಸುದ್ದಿ, ಚನ್ನಗಿರಿ : ತಾಲೂಕಿನ ಕೋಗಲೂರು ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಮರಿ ಕಾಡನೆಯೊಂದು ಕಾಣಿಸಿಕೊಂಡಿದೆ. ಗ್ರಾಮದ ಬಿ.ಎಸ್. ಶೈಲೇಂದ್ರ, ಆಶಾ ದಂಪತಿಗಳು ವಾಯುವಿಹಾರಕ್ಕೆ ತೆರಳಿದಾಗ ಹಿಂಬದಿಯಿಂದ ಬಂದ ಮರಿಯಾನೆ ದಾಳಿ ಮಾಡಿ, ಕೆಸರಿನಲ್ಲಿ ಉರುಳಾಡಿಸಿರುವ ಘಟನೆ ನಡೆದಿದೆ.

ಆತಂಕಗೊಂಡ ದಂಪತಿಗಳ ಓಡಿ ಹೋಗಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಸದ್ಯ ದಂಪತಿಗಳಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ವಿಷಯವನ್ನು ಗ್ರಾಮಸ್ಥರಿಗೆ ತ ತಕ್ಷಣ ಗ್ರಾಮಸ್ಥರು ಕಾರ್ಯಪ್ರವೃತ್ತರಾಗಿ ಗ್ರಾಮದಲ್ಲಿ ಡಂಗುರ ಹೊಡಿಸಿ ಹೊಲ ಗದ್ದೆಗಳಿಗೆ ತೆರಳದಂತೆ ಸೂಚಿಸಿ ಸಂಬಂದಿಸಿ ಅರಣ್ಯ ಇಲಾಖೆಯವರಿಗೆ ಸುದ್ದಿಯನ್ನು ತಿಳಿಸಿದರು.
ಗ್ರಾಮಕ್ಕೆ ಅರಣ್ಯಾಧಿಕಾರಿಗಳ ಭೇಟಿ
ವಿಷಯ ತಿಳಿದ ಚನ್ನಗಿರಿ ಹಾಗೂ ಮಾವಿನಕಟ್ಟೆವಲಯ ಅರಣ್ಯಾಧಿಕಾರಿಗಳು, ಗ್ರಾಮಕ್ಕೆ ಆಗಮಿಸಿ ಆನೆಯ ಹೆಜ್ಜೆಯ ಜಾಡು ಹಿಡಿದ ಹೊರಟಾಗ ಪಕ್ಕದ ಗ್ರಾಮವಾದ ಭೀಮನೇರೆ ಗ್ರಾಮದ ಸಂಜೀವ್ ರೆಡ್ಡಿ ರೈತನ ಹತ್ತಿಯ ಹೊಲದಲ್ಲಿ ಕಾಣಿಸಿತು. ಇದೆ ಆನೆಯು ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯಲ್ಲಿ ಬುಧವಾರದಂದು ಕಾಣಿಸಿಕೊಂಡಿತ್ತು. ರಾತ್ರೋರಾತ್ರಿ ಇಲ್ಲಿಗೆ ಬಂದಿದೆ ಎಂದು ವಲಯ ಅರಣ್ಯಾಧಿಕಾರಿ ಜಗದೀಶ್ ತಿಳಿಸಿದರು.

ಅರಣ್ಯ ಇಲಾಖೆಯವರಿಗೆ ಕಾರ್ಯಚರಣೆಗೆ ಅಡ್ಡಿವುಂಟುಗಿದ್ದು, ಸ್ಥಳಕ್ಕೆ ಚನ್ನಗಿರಿ ಸಬ್ ಡಿವಿಜನ್ ಎಸಿ ಎಫ್ ಸುಬ್ರಮಣ್ಯಂ ಭೇಟಿ ನೀಡಿದರು. ನೀವುಗಳು ಸಹಾಕಾರ ನೀಡಿದರೆ ಮಾತ್ರ ನಮ್ಮ ಇಲಾಖೆಯವರು ಕಾರ್ಯಚರಣೆ ನಡೆಸಲಿಕ್ಕೆ ಅನೂಕೂಲವಾಗುತ್ತದೆ. ಅದು ಬಿಟ್ಟು ನೀವುಗಳು ಗಲಾಟೆ ಮಾಡಿದರೆ ಆನೆಯು ಭಯಗೊಂಡು ಮೈಮೇಲೆ ಎರಗುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ನೀವುಗಳು ಹೊಲದಲ್ಲಿ ಯಾರು ಕೆಲಸ ಮಾಡದೆ ತಮ್ಮ ತಮ್ಮ ಮನೆಗೆ ತೆರಳಬೇಕು ಮತ್ತು ರಾತ್ರಿ ಸಮಯದಲ್ಲಿ ಯಾರು ಜಮೀನುಗಳಿಗೆ ಬರದಂತೆ ಸೂಕ್ತ ಎಚ್ಚರಿಕೆ ನೀಡಿದರು. ಅರಣ್ಯ ಇಲಾಖೆಯವರ ಜೊತೆಯಲ್ಲಿ ಪೋಲೀಸ್ ಇಲಾಖೆಯು ಸಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.



