ಹರಿಹರ: ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆಯ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿಗೆ ನ.30 ಕೊನೆ ದಿನವಾಗಿದೆ.
ಈ ಬಗ್ಗೆ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯವಸ್ಥಾಪಕ ಮೋಹನ್ ಶೆಟ್ಟಿ, ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು 1 ವರ್ಷದ ಮತ್ತು 2 ವರ್ಷದ ಅವಧಿಗೆ ವೈಯುಕ್ತಿಕ, ಕೌಟುಂಬಿಕ ಮತ್ತು ಕುಟುಂಬ ಪ್ಲಸ್ ಎಂಬ ಮೂರು ಯೋಜನೆಗಳಲ್ಲಿ ಪಡೆಯಬಹುದು.
- 1, 2 ವರ್ಷದ ಅವಧಿಗೆ ಕಾರ್ಡ್ ಪಡೆಯಲು ಅವಕಾಶ
- ವೈಯುಕ್ತಿಕ, ಕೌಟುಂಬಿಕ ಮತ್ತು ಕುಟುಂಬ ಪ್ಲಸ್ ಎಂಬ ಮೂರು ಯೋಜನೆಗಳಿವೆ
- ಆರೋಗ್ಯ ಕಾರ್ಡ್ ನೋಂದಣಿಗೆ ನ.30 ಕೊನೆ ದಿನ
ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಕಟೀಲು ಮತ್ತು ಗೋವಾದಲ್ಲಿ ಆಸ್ಪತ್ರೆಗಳಿದ್ದು, ಕಾರ್ಡುದಾರರು ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಬಹುದು. ಕಾರ್ಡ್ ನ ಹೆಚ್ಚಿನ ಮಾಹಿತಿಗೆ ಆಸ್ಪತ್ರೆ ಮಾಹಿತಿ ಕೇಂದ್ರದ ಕೆ.ಎಂ. ರವಿಕುಮಾರ್ 9986406496 ಎಂ.ಕೆ. ರಾಮಶೆಟ್ಟಿ 9164099740, ರಾಜೀವ್ ಕುಮಾರ್, 9986406477 ಸಂಪರ್ಕಿಸಬಹುದು.
ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬ ಧ್ಯೇಯವಾಕ್ಯ ಹೊಂದಿರುವ ಮಣಿಪಾಲ್ ಆರೋಗ್ಯ ಕಾರ್ಡ್ ಸದಸ್ಯತ್ವ ಪಡೆದು ಸೌಲಭ್ಯ ಪಡೆಯಬಹುದು. ರೋಗಿಗಳು ವೈದ್ಯರ ಭೇಟಿಗೆ ಹೆಚ್ಚಿನ ಸಮಯ ಕಾಯುವುದನ್ನು ತಪ್ಪಿಸಲು ಹೊಸದಾಗಿ ಡಾ.ರಾಮ್ದಾಸ್ ಪೈ ಬ್ಲಾಕ್ ವಿಭಾಗವನ್ನು ರಚಿಸಲಾಗಿದೆ. ಒಂದು ದಿನ ಮುಂಚಿತವಾಗಿ 6364409750 ಸಂಖ್ಯೆಗೆ ಕರೆ ಮಾಡಿ ಮುಂಗಡವಾಗಿ ಕಾಯ್ದಿರಿಸಲು ಅವಕಾಶವಿದೆ ಎಂದು ತಿಳಿಸಿದರು.



