ದಾವಣಗೆರೆ: ಚೆಸ್ ಕ್ಲಬ್ ಹಾಗೂ ಸರ್ಕಲ್ ಚೆಸ್ ಸಹಯೋಗದೊಂದಿಗೆ ನಗರದ ಗುರುಭವನದಲ್ಲಿ ನ.10ರಂದು ಓಪನ್ ರಾಪಿಡ್ ಚೆಸ್ ಪಂದ್ಯಾವಳಿ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ಮಾಡಲಿದ್ದು, ಸಂಜೆ 5.30ಕ್ಕೆ ದೂಢ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡುವರು ಓಪನ್ ವಿಭಾಗದಲ್ಲಿ ಮೊದಲ 15 ಸ್ಥಾನಗಳಿಗೆ ನಗದು ಹಾಗೂ ಪಾರಿತೋಷಕ ನೀಡಲಾಗುವುದು.
8,10,12,14 ವರ್ಷದೊಳಗಿನ ವಿಭಾಗದಲ್ಲಿ ತಲ 10 ವಿಶೇಷ ಬಹುಮಾನ ನೀಡಲಾಗುವುದು. ಒಟ್ಟು 30,000 ನಗದು ಹಾಗೂ 45 ಟ್ರೋಫಿ ನೀಡಲಾಗುವುದು ಎಂದು ಸಂಘದ ಕಾರ್ಯದರ್ಶಿ ಟಿ. ಯುವರಾಜ್ ತಿಳಿಸಿದ್ದಾರೆ. ಹೆಸರು ನೋಂದಾಯಿಸಲು ನ. 9ರಂದು ಕೊನೆಯ ದಿನ. ನೋಂದಾಯಿಸಲು ಮೊ.; 9945613469, 7259310197, 9945163469 ಸಂಪರ್ಕಿಸಿ.



