ದಾವಣಗೆರೆ: ವಿವಿಧ ಜಿಲ್ಲೆಯಲ್ಲಿ ರೈತರ ಜಮೀನಿನ ಪಹಣಿಯಲ್ಲಿ ಏಕಾಏಕಿ ವಕ್ಫ್ ಬೋರ್ಡ್ ಹೆಸರು ಸೇರಿದ್ದು, ಸರ್ಕಾರದ ವಿರುದ್ಧ ಈಗಾಗಲೇ ವಿವಿಧ ಜಿಲ್ಲೆಯಲ್ಲಿ ರೈತರು ಮತ್ತು ಪ್ರತಿಪಕ್ಷಗಳು ಪ್ರತಿಭಟನೆಗೆ ಇಳಿದಿವೆ. ನಾಳೆ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.
ಬೆಳಿಗ್ಗೆ 11. 30ಕ್ಕೆ ಜಿಲ್ಲಾ ಬಿಜೆಪಿ ಕಚೇರಿಯಿಂದ ಎಸಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಜಿಲ್ಲಾ ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
- ಪ್ರಮುಖ ಅಂಶ
- ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು
- ವಕ್ಫ್ ಕಾಯ್ದೆ ದುರ್ಬಳಕೆ
- ಸರ್ಕಾರದ ರೈತ ವಿರೋಧಿ ನೀತಿ
- ವಕ್ಫ್ ಬೋರ್ಡ್ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ
- ವಕ್ಫ್ ಹೆಸರಲ್ಲಿ ಮಸೀದಿ, ಮದರಸಾಗಳಿಗೆ ಹಿಂದೂ ಭೂಮಿ
- ಪ್ರತಿಭಟನೆ ಬಳಿಕ ನೋಟಿಸ್ ಹಿಂಪಡೆಯುವ ನಾಟಕ
ಸರ್ಕಾರ ಅಕ್ರಮವಾಗಿ ವಕ್ಫ್ ಹೆಸರಿನಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಲ ರಾಜ್ಯದಾದ್ಯಂತ ಪ್ರತಿಭಟನೆ ಜೋರಾದ ಬಳಿಕ ಸರ್ಕಾರ, ನೋಟಿಸ್ ವಾಪಸ್ ಪಡೆಯುವ ನಾಟಕ ಆಡುತ್ತಿದೆ. ಒಂದು ಸಮುದಾಯದ ಓಲೈಕೆಗೆ ನಡೆಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದೂಗಳ ಭೂಮಿಯನ್ನು ಮುಸ್ಲಿಂರಿಗೆ ನೀಡಲು ಮುಂದಾಗಿದೆ. ಇದರ ವಿರುದ್ಧ ಹೋರಟ ಮಾಡಿ, ವಕ್ಫ್ ಹೆಸರಲ್ಲಿ ಮಸೀದಿ, ಮದರಸಾಗಳಿಗೆ ಹಿಂದೂ ಭೂಮಿ ನೀಡುವುದನ್ನು ತಪ್ಪಿಸಬೇಕಿದೆ ಎಂದರು.
ವಕ್ಫ್ ಕಾಯ್ದೆಯ ದುರ್ಬಳಕೆ ಮಾಡಿಕೊಂಡು ರೈತರ ,ಹಿಂದೂ ದೇವಾಲಯ, ಮಠಗಳ ಭೂಮಿಯನ್ನು ವಕ್ಫ್ ಗೆ ಸೇರಿಸುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲದಲಿ ಮಾಜಿ ಸಚಿವ ರೇಣುಕಾಚಾರ್ಯ, ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರು ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜ ನಾಯಕ್, ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್. ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ. ಜಿ. ಅಜಯ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.