Connect with us

Dvgsuddi Kannada | online news portal | Kannada news online

ದಾವಣಗೆರೆ: ಭರ್ಜರಿ ಏರಿಕೆ ಕಂಡ ಅಡಿಕೆ ದರ; 51 ಸಾವಿರ ಗಡಿದಾಟಿದ‌ ಬೆಲೆ; ರೈತರಲ್ಲಿ ಸಂತಸ- ಈ ವರ್ಷ ಇಳುವರಿ ಮಾತ್ರ ಕಮ್ಮಿ..!!!

arecanut rate davangere

ಪ್ರಮುಖ ಸುದ್ದಿ

ದಾವಣಗೆರೆ: ಭರ್ಜರಿ ಏರಿಕೆ ಕಂಡ ಅಡಿಕೆ ದರ; 51 ಸಾವಿರ ಗಡಿದಾಟಿದ‌ ಬೆಲೆ; ರೈತರಲ್ಲಿ ಸಂತಸ- ಈ ವರ್ಷ ಇಳುವರಿ ಮಾತ್ರ ಕಮ್ಮಿ..!!!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ಭರ್ಜರಿ ಏರಿಕೆ ಕಂಡಿದೆ. ಒಂದು ವಾರದಿಂದ 50 ಸಾವಿರ ಸಮೀಪನೇ ಬೆಲೆ ಇದ್ದು, ಇಂದು 51. ಸಾವಿರ ಗಡಿದಾಟಿದೆ. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಅಡಿಕೆ ದರ ಇಳಿಕೆಯಾಗಿವುದು ಸಾಮಾನ್ಯ. ಆದರೆ, ಈ ವರ್ಷ ಇನ್ನೂ ಒಂದೆರಡು ಕೊಯ್ಲು ಇರುವಾಗಲೇ ದರ 51 ಸಾವಿರ ಗಡಿ ತಲುಪಿದೆ. ಇದರಿಂದ ರೈತರ ಮುಳಖದಲ್ಲಿ ಸಂತಸ ಮೂಡಿದೆ. ಆದರೆ, ಪ್ರತಿ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಇಳುವರಿಯೇ ಇಲ್ಲ. ಏಕೆಂದ್ರೆ ಕಳೆದ ವರ್ಷದ ತೀವ್ರ ಮಳೆ ಕೊರತೆಯಿಂದ ಈ ವರ್ಷ ಇಳುವರಿ ತೀವ್ರ ಕುಸಿದಿದೆ. ಕಾಯಿ‌ ಕಟ್ಟಿರುವುದೇ ಅರ್ಧ, ಅರದಲ್ಲೂ ನಿರೀಕ್ಷಿತ ತೂಕ ಬರುತ್ತಿಲ್ಲ.

ಇಂದು (ಅ.28) ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 51,000 ರೂ. ಇದ್ದು, ಕನಿಷ್ಠ ಬೆಲೆ 44,000 ರೂ. ಇದೆ.  ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದೆ. ಜೂನ್ ಮೊದಲ ವಾರ 54 ಸಾವಿರ ಗಡಿ ದಾಟಿದ್ದ ಬೆಲೆ, ಜೂ.20ರಿಂದ ದಿನದಿಂದ ದಿನಕ್ಕೆ ಕುಸಿಯುತ್ತ ಬಂದಿದ್ದು, ಸೆಪ್ಟೆಂಬರ್ ನಲ್ಲಿ ಹೊಸ ಅಡಿಕೆ 46 ಸಾವಿರ ಗಡಿ ತಲುಪಿತ್ತು. ಈಗ ಅಕ್ಟೋಬರ್ ನಲ್ಲಿ ಚೇತರಿಕೆ ಕಂಡು 50 ಸಾವಿರ ಗಡಿ ಸಮೀಪ ಬಂದಿದೆ. ಈ ಬಾರಿಯ ಉತ್ತಮ ಮುಂಗಾರು ಕೃಪೆಯಿಂದ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ತುಂಬಿದ್ದು, ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ನೀರು ಸಿಗುವ ಖಾತ್ರಿಯಾಗಿದೆ.

ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಈ ವರ್ಷ ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು. ಕಳೆದ ಬಾರಿಯ ತೀವ್ರ ಬರದಿಂದ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿತ್ತು. ಈಗ ಜೋರು ಮಳೆಯಿಂದ ಬೋರ್ ವೆಲ್ ಗಳು ಚೇತರಿಕೆ ಕಂಡಿವೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇನ್ನೂ ಹಿಂಗಾರು ಮಳೆ ಸಹ ಸಾಕಷ್ಟು ಸುರಿದಿದೆ.

2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ‌ ಏಕಾಏಕಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಏಪ್ರಿಲ್ ನಲ್ಲಿ ಗರಿಷ್ಠ 54 ಸಾವಿರ ಗಡಿ ತಲುಪಿತ್ತು. ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿ ಕುಸಿತ ಕಂಡಿತ್ತು. ಜೂನ್ ತಿಂಗಳ ಎರಡನೇ ವಾರದಿಂದ ಮತ್ತೆ ಕುಸಿತ ಕಂಡು, ಜುಲೈನಲ್ಲಿ 51 ಸಾವಿರ ಇತ್ತು. ಆಗಸ್ಟ್ ನಲ್ಲಿ ಹೊಸ ಅಡಿಕೆ 42 ಸಾವಿರಕ್ಕೆ ಕುಸಿದಿತ್ತು.‌ಸೆಪ್ಟಂಬರ್, ಅಕ್ಟೋಬರ್ ನಲ್ಲಿ ಮತ್ತಷ್ಟು ಚೇತರಿಕೆ ಕಂಡಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಅ.28ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಗರಿಷ್ಠ ಬೆಲೆ 51,000ರೂ., ಕನಿಷ್ಠ 44,000 ಹಾಗೂ ಸರಾಸರಿ ಬೆಲೆ 48,842 ರೂ. ಇದೆ. ಬೆಟ್ಟೆ ಅಡಿಕೆ ಗರಿಷ್ಠ ಎಲ್ 32,786 ರೂ. ಇದೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top