ದಾವಣಗೆರೆ: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಸಲಹಾ ಸಮಿತಿ ಸದಸ್ಯರಾಗಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ (Davangere MP Prabha mallikarjun) ನೇಮಿಸಲಾಗಿದೆ. ಪ್ರಭಾ ಮಲ್ಲಿಕಾರ್ಜುನ್ ಆರೋಗ್ಯ ಸಮಿತಿ ಜತೆ ಶಿಕ್ಷಣ ಸಮಿತಿ ಸದಸ್ಯರಾಗಿಯೂ ನೇಮಿಸಲಾಗಿದೆ.
ಈ ಸಮಿತಿಯಲ್ಲಿ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ , ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರಾದ ಜಯಂತ್ ಚೌಧರಿ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವರಾದ ಡಾ.ಸುಕಾಂತ ಮಜುಂದಾರ್ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯಲ್ಲಿ ಎಂಟು ಲೋಕಸಭಾ ಸದಸ್ಯರು ಹಾಗೂ ಎಂಟು ರಾಜ್ಯಸಭಾ ಸದಸ್ಯರು ನೇಮಕಗೊಂಡಿದ್ದಾರೆ ಹಾಗೂ ಇಬ್ಬರು ಪದನಿಮಿತ್ತ ಸದಸ್ಯರುಗಳಿದ್ದಾರೆ.



