ದಾವಣಗೆರೆ: ನಗರದಲ್ಲಿ ಮನೆಕಳ್ಳತನ ಮಾಡುತ್ತಿದ್ದ ಇಬ್ಬರು ಒರಿಸ್ಸಾ ರಾಜ್ಯದ ಅಂತರ್ ರಾಜ್ಯ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 4.29 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 91 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.
ನಗರದ ಆರ್,ಎಂ,ಸಿ ರಸ್ತೆಯ ಮಂಜುನಾಥ ದೇವಸ್ಥಾನದ ಹಿಂಭಾಗ ನಿವಾಸಿ ಕೊಟ್ರೇಶ್ ಆಚಾರಿ, ತಮ್ಮ ಮನೆಯಲ್ಲಿಟ್ಟಿದ್ದ 57 ಗ್ರಾಂ ಬಂಗಾರದ ಆಭರಣಗಳು, 535 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು 93,000/- ರೂ ನಗದು ಹಣ ಕಳ್ಳತನವಾಗಿದ್ದು, ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿ ಅಂತ ದೂರಿನ ಮೇರೆಗೆ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿ ಮತ್ತು ಮಾಲು ಪತ್ತೆ ಮಾಡಲು ಎಎಸ್ಪಿಗಳಾದ ವಿಜಯ್ ಕುಮಾರ್ ಎಂ ಸಂತೋಷ್, ಮಂಜುನಾಥ ಜಿ ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಗಾಂಧಿ ನಗರ ವೃತ್ತದ ಪೊಲೀಸ್ ನಿರೀಕ್ಷಕರಾದಬಾಲಚಂದ್ರ ನಾಯಕ್ ಮಾರ್ಗದರ್ಶನದಲ್ಲಿ ಆರ್,ಎಂ,ಸಿ ಯಾರ್ಡ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಸಚೀನ್ ಬಿರಾದಾರ್, ಪಿಎಸ್ ಐ ಪುಷ್ಪಲತಾ ಇವರನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡವು 1) ನಂದಿನಿ @ ನಂದಿನಿ ಸಿಂಗ್ (32) ವರ್ಷ 2) ರುವೀ @ ರುಬೀ ಜಾನಿ (35 )ವರ್ಷ, ಅತಾವೀರ ಗ್ರಾಮ, ಸಂಬಲ್ ಪುರ ಜಿಲ್ಲೆ, ಒರಿಸ್ಸಾ ರಾಜ್ಯದವರನ್ನು ಬಂಧಿಸಲಾಗಿದೆ.
ಇಬ್ಬರು ಆರೋಪಿತರಿಂದ ಸುಮಾರು 4,29,000/-ರೂ ಬೆಲೆ ಬಾಳುವ 57 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 535 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಮತ್ತು 91,000/- ರೂ ನಗದು ಹಣವನ್ನು ವಶಪಡಿಸಿಕೊಳ್ಳವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.