ರೈತರು ಸಣ್ಣದಾಗಿ ವ್ಯಾಪಾರ ಮಾಡುವ ಯೋಚನೆಯಲ್ಲಿದ್ರೆ ಕೃಷಿ ಇಲಾಖೆ ನಿಮಗಾಗಿ ಸುವರ್ಣಾವಕಾಶ ಕಲ್ಪಿಸಿದೆ. ಕೃಷಿ ಇಲಾಖೆಯ ಕೃಷಿ ಸಂಸ್ಕರಣೆ ಯೋಜನೆಯಡಿ ಹಿಟ್ಟಿನ ಗಿರಣಿ, ಖಾರ ಕುಟ್ಟುವ ಯಂತ್ರ, ಶಾವಿಗೆ ಯಂತ್ರ, ಭತ್ತದ ಮಿಲ್, ರೊಟ್ಟಿ ಮಾಡುವ ಯಂತ್ರ ಹಾಗೂ ಸಣ್ಣ ಎಣ್ಣೆ ಗಾಣಗಳಿಗೆ ಸರ್ಕಾರ ಸಹಾಯಧನ ಲಭ್ಯವಿದ್ದು, ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಿ ಈ ಯೋಜನೆಯ ಉಪಯೋಗ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿದ್ದಾರೆ.



