ದಾವಣಗೆರೆ: ಸತತ ಮಳೆಯಿಂದ ನೆನೆದ ಗೋಡೆ ಕುಸಿದು ವೃದ್ಧರೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಲ್ಲಿ ನಡೆದಿದೆ.
ಕುಳಗಟ್ಟೆ ಬಸವರಾಜಪ್ಪ ಮೃತ ವೃದ್ಧ. ಕಳೆದ ಕಲವು ದಿನದಿಂದ ನಿರಂತರ ಮಳೆಯಿಂದ ಶನಿವಾರ ಬೆಳಗಿನ ಹೊತ್ತಲ್ಲಿ ಮನೆಯ ಗೋಡೆ ಕುಸಿದಿದೆ. ಬಸವರಾಜಪ್ಪ ಮಗ ಹಾಗೂ ಸೊಸೆ ಹೊರಗೆ ಬಂದರು. ಬಸವರಾಜಪ್ಪ ಹೊರಬರುವಾಗಲೇ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ. ಸ್ಥಳೀಯರು ಕುಸಿದ ಗೋಡೆ ತೆರವುಗೊಳಿಸಿ ಬಸವರಾಜಪ್ಪ ಅವರನ್ನು ಹೊರ ತೆಗೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಬಸವರಾಜಪ್ಪ ಮೃತಪಟ್ಟಿದ್ದರು.
ಸ್ಥಳಕ್ಕೆ ತಹಶೀಲ್ದಾರ್ ರುಕ್ಮಿಣಿ ಬಾಯಿ ಭೇಟಿ ನೀಡಿ ಪರಿಶೀಲಿಸಿದರು. ಮೃತರ ಕುಟುಂಬಕ್ಕೆ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ 5 ಲಕ್ಷ ಪರಿಹಾರ ಚೆಕ್ ನೀಡಿದರು. ಎಸ್‌ಐ ಜಗದೀಶ್, ಆರ್‌ಐ ಶ್ರೀನಿವಾಸ್ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ ಕೃಷ್ಣಮೂರ್ತಿ, ಸದಸ್ಯರಾದ ಜಿ.ಎಸ್. ಶಿವರಾಜ್, ರಹಮತ್ ಉಲ್ಲಾ ಮತ್ತಿತರು ಇದ್ದರು.



