ದಾವಣಗೆರೆ: ಪ್ರಾದೇಶಿಕ ಅರಣ್ಯ ವಿಭಾಗದಿಂದ 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅಕ್ಟೋಬರ್ 7 ರಂದು ಬೆಳಗ್ಗೆ 9 ಗಂಟೆಗೆ ಜಗಳೂರು ಪಟ್ಟಣದ ದೊಡ್ಡಮಾರಿಕಾಂಬ ದೇವಸ್ಥಾನದ ಬಳಿಯಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಂಗಯ್ಯನದುರ್ಗ ಕೊಂಡಕುರಿ ವನ್ಯಜೀವಿ ವಲಯವು ಜಗಳೂರು ತಾಲ್ಲೂಕಿಗೆ ಒಳಪಟ್ಟಿದ್ದು ಸಪ್ತಾಹದ ಅಂಗವಾಗಿ ಸಹಬಾಳ್ವೆಯೊಂದಿಗೆ ವನ್ಯಜೀವಿ ಸಂರಕ್ಷಣೆ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ತಿಳಿಸಿದ್ದಾರೆ.



