ದಾವಣಗೆರೆ: ನಿಷೇಧಿತ ಇ-ಸಿಗರೇಟ್, ಹುಕ್ಕಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ ನಿಷೇಧಿತ ಇ-ಸಿಗರೇಟ್, ಹುಕ್ಕಾ ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ಕೆ.ಟಿ.ಜೆ. ನಗರ ಪೊಲೀಸ್ ಠಾಣಾ ಸರಹದ್ದಿನ ಹದಡಿ ಮುಖ್ಯರಸ್ತೆಯ ಪುಡ್ ಅಂಬಾಸಿಡರ್ ಎಂಬ ಹೋಟಿಲ್ ಪಕ್ಕದ ಶ್ರೀ ಮುತ್ತು ಪಾನ್ ಶಾಪ್ ನ ರುದ್ರೇಶ್( 31) ಬಂಧಿರ ಆರೋಪಿ.
ಸರ್ಕಾರದ ಅನುಮತಿ ಇರದೇ ಇರುವ ಸಿಗರೇಟ್ ಗಳನ್ನು ಮಾರಾಟ ಮತ್ತು ತುಂಬಾಕು ಸೇವನೆ ಅರೋಗ್ಯಕರ ಎಂಬ ನಾಮಫಲಕವನ್ನು ಹಾಕಿಕೊಂಡು ಸಾರ್ವಜನಿಕರಿಗೆ ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆದಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ & ಮಂಜುನಾಥ. ಜಿ , ನಗರ ಡಿವೈಎಸ್ಪಿ ಶ್ರೀ ಮಲ್ಲೇಶ್ ದೊಡ್ಮನಿ ರವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ತೇತೃತ್ವದಲ್ಲಿ ಪಿ ಎಸ್ ಐ ಸಾಗರ್ ಅತ್ತರವಾಲ್ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿದೆ.
ಕಾನೂನು ಬಾಹಿರವಾಗಿ ನಿಷೇಧಿತ ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯಿಂದ 07 ಪಾಕೇಟ್ ನಿಷೇಧಿತ ಇ- ಸಿಗರೇಟ್, 06 ನಿಷೇಧಿತ ಹುಕ್ಕಾ ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿತ ರುದ್ರೇಶ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.



