ದಾವಣಗೆರೆ: ತ್ವರಿತ ಲೋನ್ ಆ್ಯಪ್ ಬಗ್ಗೆ ಜಾಗರೂಕತೆ ವಹಿಸಿ; ಜಿಲ್ಲಾ ಪೊಲೀಸ್ ಎಚ್ಚರಿಕೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತ್ವರಿತ ಸಾಲಗಳನ್ನು ನೀಡುವ ಕುರಿತಾಗಿ ಜಾಹಿರಾತುಗಳು ಬರುತ್ತಿದ್ದು, ತ್ವರಿತ ಲೋನ್ ನೀಡುವ ಆ್ಯಪ್ ಬಗ್ಗೆ ಜಾಗರೂಕತೆ ವಹಿಸಿಬೇಕು ಎಂದು ಜಿಲ್ಲಾ ಪೊಲೀಸ್ ಎಚ್ಚರಿಕೆ ನೀಡಿದೆ.

ಗೂಗಲ್ ಪ್ಲೇ ಸ್ಟೋರ್/ ಅಪಲ್ ಆ್ಯಪ್ ಸ್ಟೋರ್ಗಳ Mobile Application ‘ಗಳಲ್ಲಿ ಸಾರ್ವಜನಿಕರಿಗೆ ತ್ವರಿತ ಗತಿಯಲ್ಲಿ ಸಾಲವನ್ನು ಒದಗಿಸಲಾಗುತ್ತಿದ್ದು, ಸಾಲಗಳ ಮೇಲಿನ ಬಡ್ಡಿ ದರಗಳು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಿಗದಿಪಡಿಸಿರುವ ಬಡ್ಡಿ ದರಕ್ಕಿಂತ ಹೆಚ್ಚಿರುವುದು ಕಂಡುಬಂದಿರುತ್ತದೆ. ಇಂತಹ Mobile Application ಗಳ ಮೂಲಕ ಸಾಲ ಪಡೆದ ಅಮಾಯಕ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ, ಅದಲ್ಲದೆ ಸಾಲ ವಸೂಲಾತಿಗಾಗಿ Mobile Application ನಿರ್ವಾಹಕರು ಗ್ರಾಹಕರಿಗೆ ಹಿಂಸೆ ನೀಡುವ ಅವಕಾಶ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕರು/ಗ್ರಾಹಕರು ಇಂತಹ Instant loan App Mobile Application ಗಳಿಂದ ಸಾಲವನ್ನು ಪಡೆಯುವ ಮುಂಚೆ ಹೆಚ್ಚು ಜಾಗರೂಕರಾಗಿರುವುದು ಅತ್ಯವಶ್ಯಕವಾಗಿದೆ.

ಸಾಮಾನ್ಯವಾಗಿ ಗೂಗಲ್ ಪ್ಲೇ ಸ್ಟೋರ್/ ಆ್ಯಪಲ್ ಆ್ಯಪ್ ಸ್ಟೋರ್ಗಳ ಕಂಡು ಬರುವ Instant loan Apps; Navi Loan app, CASHE, EarlySalary, Dhani, FlexiLoans, Money View Loans, mPokket, Lendingkart, Indialends, NIRA, Simpl, Krazy Bee, Slice, One Mobikwik, ZestMoney, TrueBalance, Mobiquity, MyLoanCare, CapitalFloat, KreditBee, Kreditzy etc..

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *