ದಾವಣಗೆರೆ: ಕಂಪನಿಗೆ ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂಬ ವಾಟ್ಸಾಪ್ ಗೆ ಬಂದ ಲಿಂಕ್ ಓಪನ್ ಮಾಡಿ ನಗರದ ಖಾಸಗಿ ಶಾಲೆ ಶಿಕ್ಷಕರೊಬ್ಬರು ಬರೋಬ್ಬರಿ 91.90 ಲಕ್ಷ ಕಳೆದುಕೊಂಡಿದ್ದಾರೆ.
ವಾಟ್ಸಾಪ್ ಗೆ ಬಂದ ನ್ಯೂಮೌಂಟ್ ಗೋಲ್ಡ್ ಕ್ಯಾಪಿಟಲ್ ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿದಾಗ ಅಮೆರಿಕಾ ಟ್ರೇಡಿಂಗ್ ಮತ್ತು ಮೈನಿಂಗ್ ಕಂಪನಿ ಎಂದು ಪರಿಚಯಿಸಿ, ದಾಖಲೆಗಳನ್ನು ಪಡೆದು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ನಂತರ ಖಾತೆ ತೆರೆದ ಲಾಭಾಂಶದ ಆಸೆ ತೋರಿಸಿ ಹಂತ ಹಂತವಾಗಿ 91.90 ಲಕ್ಷ ರೂ. ಹಾಕಿಸಿಕೊಂಡು ವಂಚಿಸಿದ್ದಾರೆ.
ಹಣ ಹಾಕಿದ ನಂತರ ನನ್ನ ಖಾತೆಯಿಂದ ರೂ ಹಣವನ್ನು ಬಿಡಿಸಿಕೊಳ್ಳಲು ಹೋದಾಗ ಖಾತೆ ಲಾಕ್ ಆಗಿದ್ದು ಗೊತ್ತಾಗಿದೆ. ಅಕೌಂಟ್‌ನಲ್ಲಿ ಲಾಭಾಂಶ ಸೇರಿ ಒಟ್ಟು ರೂ. 2,00,00,000 ಹಣ ಇದ್ದು, ವಿತ್ ಡ್ರಾ ಮಾಡಬೇಕೆಂದರೆ ಮತ್ತೆ 47,29,589 ಹಣವನ್ನು ಪಾವತಿಸಬೇಕು ಎಂದು ವಂಚಕರು ಮೆಸೇಜ್ ಕಳುಹಿಸಿದರು.
ಆಗ ಯಾರೋ ಅಪರಿಚಿತ ವ್ಯಕ್ತಿಗಳು
ಹೆಚ್ಚಿನ ಲಾಭಾಂಶ ನೀಡುತ್ತೇನೆಂದು ನಂಬಿಸಿ ನನ್ನ ಖಾತೆಗಳಿಂದ ಆನ್ ಲೈನ್ ಮೂಲಕ ಹಂತ ಹಂತವಾಗಿ ಒಟ್ಟು91,90,743/- ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ನಿಟ್ಟುವಳ್ಳಿಯ ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ನೀಡಿದ್ದಾರೆ.