ಬೆಂಗಳೂರು: ಕೃಷಿ ಇಲಾಖೆ (Department of Agriculture) ದೊಡ್ಡ ಪ್ರಮಾಣದ ನೇಮಕಾತಿಗೆ ಮುಂದಾಗಿದೆ. ಒಟ್ಟು 945 ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳನ್ನೊಳಗೊಂಡ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆ ವೀಕ್ಷಿಸಲು ಕೆಪಿಎಸ್ ಸಿ ವೆಬ್ ಸೈಟ್ (https://kpsc.kar.nic.in/notification.html) ಭೇಟಿ ನೀಡಿ. ಅರ್ಹ ಅಭ್ಯರ್ಥಿಗಳು ಅ. ನ.7 ರೊಳಗೆ ಕೆಪಿಎಸ್ ಸಿ ವೆಬ್ ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ, ಅರ್ಜಿ ಶುಲ್ಕ, ವಯೋಮಿತಿ ಸೇರಿ ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ.
- ಹುದ್ದೆ: ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ
- ಒಟ್ಟು ಹುದ್ದೆಗಳ ಸಂಖ್ಯೆ: 945 ಗ್ರೂಪ್ ಬಿ
- ಉಳಿಕೆ ಮೂಲ ಮೂಲವೃಂದ: ಕೃಷಿ ಅಧಿಕಾರಿ 86 + ಸಹಾಯಕ ಕೃಷಿ ಅಧಿಕಾರಿ 586
- ಹೈದರಾಬಾದ್ ಕರ್ನಾಟಕ: ಕೃಷಿ ಅಧಿಕಾರಿ 42 + ಸಹಾಯಕ ಕೃಷಿ ಅಧಿಕಾರಿ 231
- ವೇತನ ಶ್ರೇಣಿ:ಕೃಷಿ ಅಧಿಕಾರಿ: 43,100-83,900 ರೂ., ಸಹಾಯಕ ಕೃಷಿ ಅಧಿಕಾರಿ: 40,900- 78,200 ರೂ.
- ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 7, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: ನವೆಂಬರ್ 7
- ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ: 600 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿ (ಒಬಿಸಿ): 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 50 ರೂ., ಎಸ್‌ಸಿ, ಎಸ್‌ಟಿ, ಪ್ರವರ್ಗ-1, ವಿಶೇಷ ಚೇತನರು: ಶುಲ್ಕ ವಿನಾಯಿತಿ
ಶೈಕ್ಷಣಿಕ ವಿದ್ಯಾರ್ಹತೆ :ಶೇ. 85 ಹುದ್ದೆಗಳಿಗೆ: ಬಿ.ಎಸ್ಸಿ ಕೃಷಿ ಅಥವಾ ಬಿ.ಎಸ್ಸಿ (ಆನರ್ಸ್) ಕೃಷಿ ಪದವಿ ಉತ್ತೀರ್ಣರಾಗಿರಬೇಕು.
ಶೇ. 15 ರಷ್ಟು ಹುದ್ದೆಗಳಿಗೆ:
1) ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ
2) ಬಿ.ಟೆಕ್ (ಆಹಾರ ತಂತ್ರಜ್ಞಾನ) ಅಥವಾ
3) ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ಅಥವಾ
4) ಬಿ.ಎಸ್ಸಿ (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ ಅಥವಾ
5) ಬಿ.ಎಸ್ಸಿ (ಆನರ್ಸ್) ಅಗ್ರಿ ಬಿಸಿನೆಸ್ ಮ್ಯಾನೇಜ್ ಮೆಂಟ್ ಅಥವಾ
6) ಬಿ.ಎಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ) ಅಥವಾ
7) ಬಿಟೆಕ್ (ಜೈವಿಕ ತಂತ್ರಜ್ಞಾನ) ಅಥವಾ
8) ಬಿ.ಎಸ್ಸಿ (ಅಗ್ರಿಕಲ್ಪರಲ್ ಎಂಜಿನಿಯರಿಂಗ್) ಅಥವಾ
9) ಬಿ.ಟೆಕ್ (ಆಗ್ರಿಕಲ್ಪರಲ್ ಎಂಜಿನಿಯರಿಂಗ್).
ವಯೋಮಿತಿ:ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ – 18 ವರ್ಷ ವಯೋಮಾನದವರಾಗಿರಬೇಕು. ಇನ್ನು ರಾಜ್ಯ ಸರ್ಕಾರವು ಸೆ.10ರಂದು ಜಾರಿ ಮಾಡಿರುವ ಆದೇಶದಲ್ಲಿ ಎಲ್ಲಾ ಪ್ರವರ್ಗಗಳಿಗೆ ಒಂದು ಬಾರಿಗೆ ಅನ್ವಯಿಸುವಂತೆ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆ ನೀಡಿರುತ್ತದೆ. ಅದನ್ನು ಅಳವಡಿಸಿಕೊಂಡ ನಂತರ ಅಭ್ಯರ್ಥಿಗಳು ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.ಸಾಮಾನ್ಯ ಅರ್ಹತೆ: 38 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ: 41 ವರ್ಷ, ಪ.ಜಾ, ಪ.ಪಂ, ಪ್ರವರ್ಗ-1: 43 ವರ್ಷ.
ಕೃಷಿ ಇಲಾಖೆ ಇತಿಹಾಸದಲ್ಲಿ ಇಷ್ಟು ದೊಡ್ಡಪ್ರಮಾಣದಲ್ಲಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರಿವುದು ಇದೇ ಮೊದಲು.ಈ ನೇಮಕಾತಿಯಿಂದ ರಾಜ್ಯದ 31 ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡಲು ಅಧಿಕಾರಿಗಳನ್ನು ನೇಮಿಸಲು ಸಾಧ್ಯವಾಗಲಿದೆ. 2008 ರಲ್ಲಿ ಕೆಪಿಎಸ್‌ಸಿ ಮೂಲಕ 410 ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು . ಇದೀಗ ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ ಮಾಡಲು ಕ್ರಮ ವಹಿಸಲಾಗಿದ್ದು, ಮೂರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕೃಷಿ ಸಚಿವರು ಸೂಚಿಸಿದ್ದಾರೆ.