ದಾವಣಗೆರೆ: ಸಾವಿರ ರೂಪಾಯಿ ಸಾಲ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಚಾಕು ಇರಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಾಣದಗಟ್ಟೆ ಗ್ರಾಮದಲ್ಲಿ ನಡೆದಿದೆ.
ಗುಂಪು ಕಟ್ಟಿಕೊಂಡು ಬಂದ ಯುವಕನೊರ್ವ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ. ಅಣ್ಣಪ್ಪ (45) ಚಾಕು ಇರಿತಕ್ಕೆ ಒಳಗಾದವನು. ಒಂದು ಸಾವಿರ ರೂಪಾಯಿ ಕೊಡದೆ ಇರುವುದಕ್ಕೆ ಗಾಣದಗಟ್ಟೆ ಗ್ರಾಮದ ರಾಕೇಶ್ ಎಂಬಾತ ಚಾಕು ಇರಿದಿದ್ದಾನೆ. ಅಣ್ಣಪ್ಪ ಹಾಗೂ ಸುನೀಲ್ ಇಬ್ಬರು ಸ್ನೇಹಿತರು, ರಾಕಿ ಹತ್ತಿರ ಒಂದು ಸಾವಿರ ಸಾಲ ಪಡೆದಿದ್ದರು. ಎರಡು ತಿಂಗಳಾದರೂ ನೀಡಿಲ್ಲ ಎಂದು ಗಾಣದಗಟ್ಟೆಯಲ್ಲಿ ರಾಕಿ ಜಗಳ ತೆಗೆದಿದ್ದನು. ಜಗಳ ಮಾಡುತ್ತಿದ್ದಾಗ ಸ್ನೇಹಿತನ ಪರ ಹೋದ ಅಣ್ಣಪ್ಪ, ಇನ್ನೆರಡು ದಿನಗಳಲ್ಲಿ ನಾನೇ ಸಾವಿರ ರೂಪಾಯಿ ನೀಡುತ್ತೇನೆ ಎಂದು ಒಪ್ಪಿಕೊಂಡಿದ್ದನು.
ಇದನ್ನು ಒಪ್ಪದ ರಾಕು, ಹಣನಾ ಸುನೀಲ್ ಕೊಡಬೇಕಿರುವುದು ನೀನು ಅಲ್ಲ ಎಂದು ಜಗಳ ತೆಗೆದಿದ್ದನು. ಸಣ್ಣ ಜಗಳ ವಿಕೋಪಕ್ಕೆ ಹೋಗಿ ರಾಕೇಶ್ ಅಣ್ಣಪ್ಪನಿಗೆ ಚಾಕು ಇರಿದಿದ್ದಾನೆ. ಸದ್ಯ ಕುಟುಂಬಸ್ಥರು ಅಣ್ಣಪ್ಪನನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.