ಆಂಕ್ಲೆಂಡ್: 96 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆಯಾದ ಆಲ್‍ರೌಂಡರ್ ರವೀಂದ್ರ ಜೆಡೇಜಾ ಮತ್ತು ಬೌಲರ್ ನವದೀಪ್ ಸೈನಿ ಅವರ ರೋಚಕ ಆಟದ ಹೊರತಾಗಿಯೂ ಭಾರತ, ನ್ಯೂಜಿಲೆಂಡ್ ವಿರುದ್ಧ ಸೊಲೊಪ್ಪಿಕೊಂಡಿತು. ಈ ಮೂಲಕ ನ್ಯೂಜಿಲೆಂಡ್, ಭಾರತದ ವಿರುದ್ಧದ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು. ಇದರೊಂದಿಗೆ ಟಿ20 ಸರಣಿಯಲ್ಲಿ ಆದ ಕ್ಲೀನ್ ಸ್ವೀಪ್ ಗೆ ಸೇಡು ತೀರಿಸಿಕೊಂಡಿತು.
Tough day at the office but great character shown by #TeamIndia. #NZvIND pic.twitter.com/jgyz9YyhYt
— BCCI (@BCCI) February 8, 2020
ರವೀಂದ್ರ ಜಡೇಜಾ ಬೌಲಿಂಗ್, ಬ್ಯಾಟಿಂಗ್‍ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ತಾನೊಬ್ಬ ಸಮರ್ಥ ಆಲ್‍ರೌಂಡರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಭಾರತಕ್ಕೆ ಹೀನಾಯ ಸೋಲು ಖಚಿತ ಎಂದಕೊಂಡಿದ್ದ ಪಂದ್ಯಕ್ಕೆ ರೋಚಕ ತಿರುವು ನೀಡಿದ ಜೆಡೇಜಾ-ಸೈನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು.
ಆಕ್ಲೆಂಡ್‍ನ ಈಡನ್ ಪಾರ್ಕ್ ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 274 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ 48.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 251 ರನ್ ಗಳಿಸಲು ಶಕ್ತವಾಯಿತು. ಇದರೊಂದಿಗೆ 22 ರನ್ ಗಳ ಅಂತರದಿಂದ ಸೋಲು ಒಪ್ಪಿಕೊಂಡಿತು.
ಶ್ರೇಯಸ್ ಅಯ್ಯರ್ 52 ರನ್ (57 ಎಸೆತ, 7 ಬೌಂಡರಿ, 1 ಸಿಕ್ಸ್), ರವೀಂದ್ರ ಜಡೇಜಾ 55 ರನ್ (73 ಎಸೆತ, 2 ಬೌಂಡರಿ, 1 ಸಿಕ್ಸ್) ಹಾಗೂ ನವದೀಪ್ ಸೈನಿ 45 ರನ್ (49 ಎಸೆತ, 5 ಬೌಂಡರಿ, 2 ಸಿಕ್ಸ್) ಹೊಡೆದರು.

ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 22 ರನ್ ಗಳಿಂದ ಗೆದ್ದರೂ ಜಡೇಜಾ ಮತ್ತು ನವದೀಪ್ ಸೈನಿಯ ಆಟ ಮೆಚ್ಚುಗೆ ಗಳಿಸಿತು. ಭಾರತ 150 ರನ್ ಗಳಿಸುವುದು ಅನುಮಾನವಾಗಿದ್ದ ಪಂಧ್ಯದಲ್ಲಿ 8ನೇ ವಿಕೆಟಿಗೆ ಈ ಬ್ಬರು 80 ಎಸೆತಗಳಲ್ಲಿ 79 ರನ್ ಜೊತೆಯಾಟವಾಡಿ ಹೀನಾಯ ಸೋಲು ತಪ್ಪಿಸಿದರು. 45ನೇ ಓವರಿನಲ್ಲಿ ಸೈನಿ ಬೌಲ್ಡ್ ಆದ ಬಳಿಕ ಚಹಲ್ ಜೊತೆ ಸೇರಿ ರನ್ ಕಲೆಹಾಕುವ ಪ್ರಯತ್ನ ಮಾಡಿದರು. ಆದರೆ, ಸಿಕ್ಸ್ ಹೊಡೆಯಲು ಹೋಗಿ ಜೆಡೇಜಾ ಬೌಂಡರಿ ಗೆರೆಯಲ್ಲಿ ಕ್ಯಾಚ್ ನೀಡಿ ಔಟಾದರು.
Out comes the sword dance ⚔️
Can Ravindra Jadeja pull off a heist?#NZvIND pic.twitter.com/rV0jP1cr22
— ICC (@ICC) February 8, 2020
ಆರಂಭಿಕ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡು ಭಾರತ ಆಘಾತಕ್ಕೆ ಒಳಗಾಯಿತು. ಬಳಿಕ ಮೈದಾಕ್ಕಿಳಿದ ವಿರಾಟ್ ಕೊಹ್ಲಿ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್‍ಗೆ ಮುಂದಾದರು. ಆದರೆ 24 ರನ್ ಗಳಿಸಿದ್ದ ಆರಂಭಿಕ ಬ್ಯಾಟ್ಸ್‍ಮನ್ ಪೃಥ್ವಿ ಶಾ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತರೆಳಿದರು. ವಿರಾಟ್ ಕೊಹ್ಲಿ ಜೊತೆ ಸೇರಿದ ಶ್ರೇಯಸ್ ಅಯ್ಯರ್ ಉತ್ತಮ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು. ಆದರೆ 15 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾಕ್ಕಿಳಿದ ಕೆ.ಎಲ್.ರಾಹುಲ್ 4 ರನ್ ಹಾಗೂ ಕೇದಾರ್ ಜಾಧವ್ 9 ರನ್ ಗಳಿಸಿ ಬಹುಬೇಗ ವಿಕೆಟ್ ಕಳೆದುಕೊಂಡರು. ಪರಿಣಾಮ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ ಕೇವಲ 96 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.



