ದಾವಣಗೆರೆ: ಈ ಬಾರಿ ಉತ್ತಮ ಮಳೆಯಾಗಿದ್ದು, ಭದ್ರಾ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಈ ವರ್ಷ ಎರಡು ಬೆಳೆಗೆ( ಮಳೆಗಾಲ-ಬೇಸಿಗೆ) ನೀರು ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಲವಗೊಪ್ಪದಲ್ಲಿ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದರು. ಕಳೆದ ವರ್ಷ ನೀರಿನ ಸಂಗ್ರಹ ಕೊರತೆ ಇತ್ತು. ಮುಂಗಾರು ಬೆಳೆಗೆ ನೀರು ಹರಿಸಲಾಗಿತ್ತು. ಈ ಬಾರಿ ನೀರಿನ ಸಂಗ್ರಹ ಹೆಚ್ಚಿದ್ದು, ಜಿಲ್ಲೆಯ ರೈತರು ಆತಂಕಪಡಬೇಕಿಲ್ಲ ಎಣಮದರು.
ಶಿವಮೊಗ್ಗ, ದಾವಣಗೆರೆ ಜಿಲ್ಲೆ ರೈತರ ನೀರಿನ ಮೂಲವಾಗಿರುವ ಭದ್ರಾ ನೀರರು, ರೈತರಿಗೆ ಒಳಿತಾಗಲಿ. ಈ ವರ್ಷ ಉತ್ತಮ ಇಳುವರಿಯಾಗಿ ಯೋಗ್ಯ ಬೆಳೆ ಕಾಣುವಂತಾಗಲಿ ಎಂದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ , ಪ್ರತಿ ವರ್ಷವೂ ಜಲಾಶಯಗಳು ಇದೇ ರೀತಿಯ ಸಮೃದ್ಧತೆ ಕಾಣುವಂತಾಗಲಿ. ಅನ್ನದಾತರು ಸುಖ,ಸಂತೋಷದಿಂದ ಇರಲಿ ಎಂದರು.
ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಬಸವರಾಜ್ ವಿ.ಶಿವಗಂಗಾ, ಲತಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತಾ ಭಾಗಿಯಾಗಿದ್ದರು.