Connect with us

Dvgsuddi Kannada | online news portal | Kannada news online

ಫ್ಲೆಕ್ಸ್  ಮುಕ್ತ  ತರಳಬಾಳು ಹುಣ್ಣಿಮೆ ಶ್ಲಾಘನೀಯ:  ಶಾಸಕ ಬಾಲಕೃಷ್ಣ ಮೆಚ್ಚುಗೆ

ಪ್ರಮುಖ ಸುದ್ದಿ

ಫ್ಲೆಕ್ಸ್  ಮುಕ್ತ  ತರಳಬಾಳು ಹುಣ್ಣಿಮೆ ಶ್ಲಾಘನೀಯ:  ಶಾಸಕ ಬಾಲಕೃಷ್ಣ ಮೆಚ್ಚುಗೆ

ಡಿವಿಜಿ ಸುದ್ದಿ, ಹಳೇಬೀಡು: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ  ಫ್ಲೆಕ್ಸ್‌ ಮುಕ್ತ ಬ್ಯಾನರ್ ನಿಷೇಧಿಸಿದ ಕಾರ್ಯ ಶ್ಲಾಘನೀಯ .  ಪ್ಲಾಸ್ಟಿಕ್ ನಿಂದ ಭೂಮಿಯ ಮೇಲೆ ಭಾರೀ ತೊಂದರೆಯಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಕರೆ ನೀಡಿದರು.

ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 6ನೇ ದಿನದ  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ತರಳಬಾಳು ಶ್ರೀಗಳು ಸರ್ಕಾರವನ್ನು ಎಚ್ಚರಿಸಿ ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸುವ ಮೂಲಕ ಸಹಸ್ರಾರು ಕುಂಟುಂಬಗಳಿಗೆಆಶ್ರಯವಾಗಿದ್ದಾರೆ ಪ್ರವಾಹ ಸಂತಸ್ತ್ರರಿಗೆ ನೆರವು ನೀಡಿದ್ದಾರಲ್ಲದೇ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿರುವುದು ಎಲ್ಲರು ಮೆಚ್ಚುವಂತಹದು ಎಂದರು.

ಚಿಂತಕ ಚಟ್ನಹಳ್ಳಿ ಮಹೇಶ್ ಮಾತನಾಡಿ, 12ನೇ ಶತಮಾನದಲ್ಲಿ ವಚನಕಾರರು ಅಧ್ಯಯನ ನಡೆಸದಿದ್ದರೆ, ಸಮಾಜದಸ್ಥಿತಿಗತಿ ಸುಧಾರಿಸುತ್ತಿರಲಿಲ್ಲ. ವಚನಕಾರರು ಬದುಕು ಬರಹ ಮಾಡಿಕೊಂಡಿದ್ದರು. ವಚನ ಸಾಹಿತ್ಯದಲ್ಲಿ ಕೃಷಿಯ ಮಹತ್ವ ತಿಳಿಸಿದ್ದರು. ಶರೀರದಲ್ಲಿ ನಡೆಯುವ ಪ್ರಕ್ರಿಯೆಯಲ್ಲಿ ಕೃಷಿ ಮಹತ್ವವಿದೆ. ಶರೀರದಲ್ಲಿ ಪಂಚೇಂದ್ರಿಯಗಳು ಕೃಷಿಯಂತೆ ಕೆಲಸ ಮಾಡಿ ಶರೀರದ ಕ್ರಿಯೆ ನಡೆಸುತ್ತವೆ.ಅನುಭವ ಮಂಟಪದಲ್ಲಿ ಧಾರ್ಮಿಕ ಚಿಂತನೆ, ಸಂಸಾರದಲ್ಲಿ ಸಹಜತೆ, ದಲಿತರ ಧ್ವನಿ, ಸಂವೇದನೆ, ಕಾಯಕ ನಿಷ್ಠೆಯೊಂದಿಗೆ ಕೃಷಿ ಬಗ್ಗೆಚಿಂತನೆ ನಡೆದಿದೆ. ಸಮಾಜವನ್ನು ಬೆಳೆಸುವ ಸಾಮರ್ಥ್ಯ ರೈತರಿಗೆ ಮಾತ್ರ ಇದೆ.

ರೈತ ಕೃಷಿ ಕಾಯಕ ನಡೆಸದಿದ್ದರೆ ಮಾನವ ಜೀವಿ ಉಳಿಯಲು ಸಾಧ್ಯವಿಲ್ಲ ಎಂಬುದು 12 ನೇ ಶತಮಾನದಲ್ಲಿ ಸಾಬೀತಾಗಿದೆ. ವಿಜ್ಞಾನದ ಬಳಕೆಗೆ ಒಂದು ಮಿತಿ ಇದೆ. ವಿಜ್ಞಾನವನ್ನು ಅತಿಯಾಗಿ ಬಳಸಿಕೊಂಡರೆ, ಸಮಾಜದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ವಿಜ್ಞಾನದ ಮಿತ ಬಳಕೆಯನ್ನು ಸಹವಚನಕಾರರು  ಎಂದರು.

ತರಳಬಾಳು  ಜಗದ್ಗುರು ಬೃಹನ್ಮಠದ ಡಾ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರು ಆನಂದಪುರ ಮುರುಘರಾಜೇಂದ್ರ ಮಠದ ಡಾ.ಶ್ರೀ  ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು ಆಶೀರ್ವಚನ ನೀಡಿದರು.

ಜೈನ್ ಅಕಾಡೆಮಿ  ವ್ಯವಸ್ಥಾಪಕ ನಿರ್ದೇಶಕ ಮೌಲಾನ ಮಹಮದ್ ಅನ್ವರ್ ಅಸಾದಿ, ಸಚಿವ ಸಿ.ಸಿ.ಪಾಟೀಲ್. ಚಿಂತಕ ಗುರುರಾಜ ಕರ್ಜಗಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಶಾಸಕ ಕೆ.ಎಸ್.ಲಿಂಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಳ್ಳಿ ಸುರೇಶ್, ತರಳಬಾಳು ಹುಣ್ಣಿಮೆ  ಮಹೋತ್ಸವ ಖಜಾಂಚಿ ಎಚ್.ಆರ್.ಕಾಂತರಾಜ್ ಮತ್ತಿತರರಿದ್ದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top