ದಾವಣಗೆರೆ: ಈ ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಒಂದು ದಿನದ ಪ್ರವಾಸದ ಪ್ಲ್ಯಾನ್ ಮಾಡಿಕೊಂಡಿದ್ದೀರಾ..? ಇದಕ್ಕಾಗಿ ಕೆಎಸ್ ಆರ್ ಟಿಸಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ.
ಕೆಎಸ್ ಆರ್ ಸಿಟಿ ಜೋಗ್ ಫಾಲ್ಸ್‌ನ್ನು ಕುಟುಂಬಸ್ಥರ ಸಮೇತ ಕಣ್ಣು ತುಂಬಿಕೊಳ್ಳಲು ವಿಶೇಷ ಬಸ್ ವ್ಯವಸ್ಥೆ ಕಲಪಿಸಿದೆ. ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ವೀಕೆಂಡ್ ಪಿಕ್ನಿಕ್ ರೀತಿ ಪ್ರತಿ ಭಾನುವಾರ ಪ್ಯಾಕೇಜ್ ರೂಪಿಸಿದೆ ಎಂದು ಸಾರಿಗೆ ಸಂಸ್ಥೆ ಟ್ರಾಫಿಕ್ ಇನ್‌ಸ್ಪೆಕ್ಟರ್ ಗಿರೀಶ ಹೇಳಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜೋಗಜಲಪಾತಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿಶೇಷವಾಗಿ ಆಯೋಜಿಸಿರುವ ರಾಜಹಂಸ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ಭಾನುವಾರ ದಾವಣಗೆರೆಯಿಂದ ಹೊರಟು ಶಿರಸಿ ಮಾರಿಕಾಂಬಾ ದರ್ಶನ ಪಡೆದು, ಅನಂತರ ಜೋಗಕ್ಕೆ ತೆರಳಿ ಜಲಪಾತ ಕಣ್ಣುಂಬಿಕೊಳ್ಳಬಹುದು.
ಮಧ್ಯಮ ವರ್ಗದ ಜನರಿಗೆ ಈ ಬಸ್ ಸೌಲಭ್ಯ ಉಪಯೋಗವಾಗಲಿದೆ. ಎರಡೂ ಕಡೆಯಿಂದವಯಸ್ಕರರಿಗೆ 670 ಮತ್ತು 12 ವರ್ಷದೊಳಗಿನ ಮಕ್ಕಳಿಗೆ 520 ಪ್ರಯಾಣ ಶುಲ್ಕ
ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿ ಭಾನುವಾರ ಬೆಳಿಗ್ಗೆ 7.30 ಕ್ಕೆ ದಾವಣಗೆರೆಯಿಂದ ಹೊರಡಲಿದೆ. ವಿಶೇಷ ಪ್ಯಾಕೇಜ್ ಬಸ್ ಗಳ ಮುಂಗಡ ಟಿಕೆಟ್ ಬುಕಿಂಗಗಾಗಿ www.ksrtc.in ವೆಬ್ ಸೈಟ್ ಅಥವಾ ಬಸ್ ನಿಲ್ದಾಣ ರಿಸರ್ವೇಶನ್ ಕೌಂಟರ್ ಗಳ ಮೂಲಕ ಆಸನಗಳನ್ನು ಕಾಯ್ದಿರಿಸಬಹುದಾಗಿರುತ್ತದೆ ಎಂದರು.



