ದಾವಣಗೆರೆ: ಮನೆ ಕಳ್ಳತನ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದು, 2.20 ಲಕ್ಷ ಮೌಲ್ಯದ ನಗದು, ಚಿನ್ನ ವಶಕ್ಕೆ ಪಡೆಯಲಾಗಿದೆ.
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜು.19ರಂದು ಮೇಲ್ಕಂಡ ಪ್ರಕರರಣದ ಆರೋಪಿತರುಗಳಾದ ಹರಿಹರ ತಾಲ್ಲೂಕಿನ ಶಂಷಿಪುರ ಗ್ರಾಮದ ಪ್ರದೀಪ (23), ಬಸವರಾಜ @ ಬಸ್ಯ (24) ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 1,05,000/- ರೂ ನಗದು, 1,03,000/- ಬೆಲೆಯ 15 ಗ್ರಾಂ ತೂಕದ ಬಂಗಾರದ ಆಭರಣಗಳು 10000/- ರೂ ಬೆಲೆಯ 110 ಗ್ರಾಂ ಬೆಳ್ಳಿಯ ಆಭರಣಗಳು ಒಟ್ಟು ಬಂಧಿತರಿಂದ 2,20,000/- ಮೌಲ್ಯದ ನಗದು ಹಾಗೂ ಆಭರಣಗಳನ್ನ ವಶಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಿ ಕೊಡಲಾಗಿದೆ. ತನಿಖೆ ಮುಂದುವರೆದಿರುತ್ತದೆ.
ಆರೋಪಿಗಳು ಹಾಗೂ ಸ್ವತ್ತಿನ ಪತ್ತೆ ಕಾರ್ಯದಲ್ಲಿ ಎಸ್ಪಿ ಉಮಾ ಪ್ರಶಾಂತ್ ಎಎಸ್ಪಿಗಳಾದ ವಿಜಯ್ ಕುಮಾರ್ ಸಂತೋಷ, ಮಂಜುನಾಥ ಜಿ. ಹಾಗೂ ಡಿವೈಎಸ್ಪಿ ಬಸವರಾಜ.ಬಿ.ಎಸ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ಉಪ-ನಿರೀಕ್ಷಕ ಮಂಜುನಾಥ ಎಸ್. ಕುಪ್ಪೇಲೂರು ಪೊಲೀಸ್ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಹರಿಹರ ಗ್ರಾಮಾಂತರ ಠಾಣೆ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆದಿದೆ.
ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಮೇಲ್ಕಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ರಾಮಚಂದ್ರಪ್ಪ, ರಸೂಲ್ & ಕರಿಯಪ್ಪ, ರಮೇಶ, ನೀಲಮೂರ್ತಿ. ಇಲಿಯಾಜ್, ನಾಗರಾಜ, ಚನ್ನಕೇಶವ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ಹನುಮಂತ, ನವೀನ್ ಕುಮಾರ್, ಗಂಗಾಧರ, ದ್ವಾರಕೇಶ, ನಾಗರಾಜ, ಋಶಿರಾಜ, ಪ್ರಸನ್ನಕಾಂತ, ಸುರೇಶ, ರಾಮಾಂಜನೇಯ, ರೂಪಾ, ಸಿದ್ದಪ,್ಪ ಮುರುಳಿ, ಜಿಲ್ಲಾ ಪೊಲೀಸ್ ಕಛೇರಿಯ ಪಿಎಸ್‌ಐ ಶ್ರೀ ಮಂಜುನಾಥ ಕಲ್ಲದೇವರ ಸಿಬ್ಬಂದಿಗಳಾದ ರಾಘವೇಂದ್ರ, ಶಾಂತರಾಜು, ಶ್ವಾನದಳದ ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



