ದಾವಣಗೆರೆ: ಸರ್ಕಾರಕ್ಕೆ ತೆರಿಗೆ ಬಾಕಿ ಉಳಿಸಿಕೊಂಡ ವಾಹನಗಳು ಹಾಗೂ ಅನುಪಯುಕ್ತ ವಾಹನಗಳನ್ನು ಜುಲೈ 24 ದಾವಣಗೆರೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ಬಹಿರಂಗ ಹರಾಜು ಮಾಡಲಾಗುವುದು.
ಹರಾಜಿನಲ್ಲಿ ಭಾಗವಹಿಸಿದವರು ಜಿ.ಎಸ್.ಟಿ ಮತ್ತು ಸಿ.ಜಿ.ಎಸ್.ಟಿ ಟಿನ್ ನಂಬರ್ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಯ ನೊಟೀಸ್ ಬೋರ್ಡ್‍ನಲ್ಲಿ ವೀಕ್ಷಿಸಬಹುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.



