ದಾವಣಗೆರೆ: ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಇ-ಚಲನ್ ಮೂಲಕ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ 1,15,447 ಪ್ರಕರಣ ದಾಖಲಿಸಿದೆ. ಇವುಗಳಲ್ಲಿ 1,11, 958 ಪ್ರಕರಣಗಳ ದಂಡ ವಸೂಲಿ ಬಾಕಿ ಇದ್ದು, ಶೀಘ್ರವೇ ಇತ್ಯಾರ್ಥ ಪಡಿಸಿಕೊಳ್ಳದಿದ್ದರೆ ವಾಹನದ ಮಾಲಿಕತ್ವ ಬದಲಾವಣೆ ಮತ್ತು ಎಫ್ ಸಿ ಮಾಡಿಸುವ ಸಂಧರ್ಭದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ದಿನಾಂಕ : 01-01-2023 ರಿಂದ ಇಲ್ಲಿಯರೆಗೂ 1,15,447 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಒಟ್ಟು 1,11,958 ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ದಂಡ ಪಾವತಿಯಾಗದೇ ಬಾಕಿ ಇರುತ್ತವೆ. ಆದ್ದರಿಂದ ಸಾರ್ವಜನಿಕರು ತಮ್ಮ ವಾಹನಗಳ ಮೇಲೆ ದಾಖಲಾಗಿರುವ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಹಾಗೂ ಪೋಸ್ಟ್ ಅಫೀಸ್ ನಲ್ಲಿ ದಿನಾಂಕ : 01-07-2024 ರಿಂದ 15-07-2024
ರವಳೆಗೆ ಪಾವತಿಸಲು ಅವಕಾಶ ನೀಡಲಾಗಿದೆ.
ಅದಷ್ಟು ಬೇಗ ತಮ್ಮ ವಾಹನಗಳ ಮೇಲಿರುವ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಇತ್ಯಾರ್ಥ ಮಾಡಿಕೊಳ್ಳಲು ಈ ಮೂಲಕ ತಿಳಿಸಲಾಗಿದ್ದು, ದಂಡದ ಮೊತ್ತವನ್ನು
ಪಾವತಿಸದೇ ವಿಳಂಬ ಮಾಡಿದ್ದಲ್ಲಿ ವಾಹನದ ಮಾಲಿಕತ್ವ ಬದಲಾವಣೆ ಮತ್ತು ಎಫ್ಸಿ ಮಾಡಿಸುವ ಸಂಧರ್ಭದಲ್ಲಿ ಕಾನೂನು ಕ್ರಮಗಳನ್ನು ಎದುರಿಸಬೇಕಾಗುವುದು ಎಂದು ಪೊಲೀಸ್ ಅಧೀಕ್ಷಕರವರು ತಿಳಿಸಿದ್ದಾರೆ.