ದಾವಣಗೆರೆ: ವಿದ್ಯುತ್ ಕಂಬದ 45 ಸಾವಿರ ರೂಪಾಯಿ ಮೌಲ್ಯದ ಅಲ್ಯೂಮಿನಿಯಂ ವೈರ್ ಕದ್ದಿದ್ದವನನ್ನು 23 ವರ್ಷಗಳ ನಂತರ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
2001 ರ ಆ. 14 ರಂದು ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ 23 ವರ್ಷಗಳ ನಂತದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಾಂತಿನಗರ ನಿವಾಸಿ ಎಸ್.ಬಿ. ಪ್ರದೀಪ್ ಎಂಬುವನನ್ನು ಬಂಧಿಸಲಾಗಿದೆ. ಹರಿಹರ ತಾಲೂಕಿನ ಮಾಜೇನಹಳ್ಳಿ ಬಳಿ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬದಲ್ಲಿದ್ದ 45 ಸಾವಿರ ರೂಪಾಯಿ ಬೆಲೆಯ 60 ಕೆಜಿ ಅಲ್ಯೂಮಿನಿಯಂ ವೈರ್ ಕಳ್ಳತನದ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ನಿವಾಸಿ ಎಸ್.ಬಿ. ಪ್ರದೀಪ್‌ನನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರ ಬಂದ ನಂತರ ಪ್ರದೀಪ್ ನ್ಯಾಯಾಲಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಎಸ್ ಪಿ ಉಮಾ ಪ್ರಶಾಂತ್ ಸೂಚನೆ ಆರೋಪಿ ಪತ್ತೆಗಾಗಿ ದಾವಣಗೆರೆ ಗ್ರಾಮಾಂತ ಡಿವೈಎಸ್ಪಿ ಬಿ.ಎಸ್. ಬಸವರಾಜ್, ಹರಿಹರ ವೃತ್ತ ನಿರೀಕ್ಷಕ ಸುರೇಶ್ ಸಗರಿ, ಪಿಎಸ್‌ಐ ಮಂಜುನಾಥ ಕುಪ್ಪೇಲೂರು ನೇತೃತ್ವದಲ್ಲಿನ ತಂಡ 23 ವರ್ಷಗಳ ವರೆಗೆ ತಲೆಮರೆಸಿಕೊಂಡಿದ್ದವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.