ದಾವಣಗೆರೆ: ನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಶ್ರೀರಾಮಸೇನೆ ಜಿಲ್ಲಾಧ್ಯಕ್ಷರಿದ್ದ ಕಾರು ಅಪಘಾತವಾಗಿದೆ.
ನಗರದ ರಿಂಗ್ ರಸ್ತೆ ಬಳಿ ಈ ಅಪಘಾತ ಸಂಭವಿಸಿದ್ದು, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ತೀವ್ರವಾಟಗಿ ಗಾಯಗೊಂಡಿದ್ದ ಮಣಿ ಸರ್ಕಾರ್ ಅವರನ್ನು ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತ ಸ್ಥಳ ಸುತ್ತ ನೆರೆದಿದ್ದ ಶ್ರೀರಾಮಸೇನೆ ಮುಖಂಡರು, ಕಾರ್ಯಕರ್ತರು, ಜನರನ್ನು ಪೊಲೀಸರು ಚದುರಿಸಿ, ಆಸ್ಪತ್ರೆಗೆ ದಾಖಲಿಸಿದರು.



