ದಾವಣಗೆರೆ: ಚನ್ನಗಿರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಮತ್ತು ಆಲ್ಟರ್ನೇಟ್ ಎನರ್ಜಿ ಟೆಕ್ನಾಲಜಿಸ್ ಎರಡು ಡಿಪ್ಲೋಮಾ ವಿಭಾಗಗಳಿಗೆ ಎಸ್. ಎಸ್. ಎಲ್. ಸಿ. ಅಥವಾ ತತ್ಸಮಾನ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಉಳಿಕೆಯಾಗಿರುವ ಸೀಟುಗಳಿಗೆ ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನೇರ ಪ್ರವೇಶ ಪಡೆಯಬಹುದು.
ಜೂ.15 ಪ್ರವೇಶಕ್ಕೆ ಕೊನೆಯ ದಿನ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಅಂಕಪಟ್ಟಿ , ಟಿಸಿ, ವ್ಯಾಸಂಗ ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ, 4 ಸ್ಟ್ಯಾಂಪ್ ಸೈಜ್ ಫೋಟೋ ಮತ್ತು ವೈದ್ಯಕೀಯ ಪ್ರಮಾಣ ಪತ್ರಗಳೊಂದಿಗೆ ಕಾಲೇಜಿಗೆ ಬರಬೇಕು. ಮಾಹಿತಿಗಾಗಿ ಈ ಕೆಳಗಿನ ನಂಬರ್ಗಳಿಗೆ ಕರೆ ಮಾಡಿ 9448873268, 9481501165, 8722688508, 9448810992, 9845337129.