ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಕ್ಷೇತ್ರ ಉಚ್ಚoಗಿದುರ್ಗದಲ್ಲಿ ಭರತ ಹುಣ್ಣಿಮೆಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರೂ ಉಚ್ಚoಗೆಮ್ಮನ ದೇವಿ ದರ್ಶನಕ್ಕೆ ಆಗಮಿಸಲಿದ್ದು, ಭಕ್ತರ ಸುರಕ್ಷತೆಗೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಡಿವೈಎಸ್ ಪಿ ಮಲ್ಲೇಶ್ ಹೇಳಿದರು.
ಭಕ್ತರ ವಾಹನಗಳು ಸುರಕ್ಷಿತವಾಗಿ ಸಂಚಾರಿಸಲು ತಾತ್ಕಾಲಿಕವಾಗಿ ಪೊಲೀಸ್ ಠಾಣೆಯನ್ನು ತೆರೆದು 2 ದಿನಗಳ ಕಾಲ ಸ್ಥಳದಲ್ಲಿ ಬಿಡುಬಿಡಲಾಗುವುದು. ಮುತ್ತು ಕಟ್ಟುವುದು ಮತ್ತು ದೇವದಾಸಿ ಪದ್ಧತಿ ಆಚರಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಹಲವು ವರ್ಷಗಳಿಂದ ನಿಷೇಧವಾಗಿರುವ ಮುತ್ತು ಕಟ್ಟುವುದು ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆಗೆ ಗ್ರಾಮದಲ್ಲಿ ಬ್ಯಾನರ್ ಹಾಕಿ ಜಾಗೃತಿ ಮೂಡಿಸುವುದು. ಆನೇಹೊಂಡ, ಅರಶಿನ ಹೊಂಡ, ದೇವಸ್ಥಾನದ ಸುತ್ತ ಮುತ್ತ ಸಿ ಸಿ ಕ್ಯಾಮೆರಾ ಅಳವಡಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿ ಹಲವು ತಂಡಗಳನ್ನು ರಚನೆ ಮಾಡಿ ಮೈಕ್ ಮೂಲಕ ಜಾಗೃತಿ ಮೂಡಿಸುವುದು
ಯಾವುದೇ ಅನಿಷ್ಟ ಪದ್ಧತಿ ಆಚರಣೆ ಮಾಡದಂತೆ ನಿಗವಹಿಸಲಾಗುವುದು ಇದನ್ನು ಮೀರಿ ಯಾರಾದರೂ ಮುತ್ತು ಕಟ್ಟುವುದಕ್ಕೆ ಪ್ರೋತ್ಸಾಹ ನೀಡಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಸೂಕ್ಷ್ಮ ಜಾಗಗಳಲ್ಲಿ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿಯನ್ನ ಪಾದಗಟ್ಟೆಯಿಂದ ಸುಮಾರು 03 ಕಿಲೋಮೀಟರ್ ದೂರವಿರುವ ಗುಡ್ಡದವರೆಗೂ ಹಾಕಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಗಳೂರು ಸಿಪಿಐ ದುರುಗಪ್ಪ, ಅರಸೀಕೆರೆ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್,ಸಿಬ್ಬಂದಿಗಳಾದ ಮಂಜುನಾಥ್, ಮಂಜಪ್ಪ,ಜಗದೀಶ್ ಉಪಸ್ಥತಿತರಿದ್ದರು.