ದಾವಣಗೆರೆ: ಅಪರಿಚಿತ ವ್ಯಕ್ತಿ ನಂಬಿ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದ ವೈದ್ಯರೊಬ್ಬರು 15 ಲಕ್ಷ ಕಳೆದುಕೊಂಡಿದ್ದಾರೆ. ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ವಂಚಿಸಿದ್ದಾನೆ.
ಶಕ್ತಿನಗರದ ಗೌತಮ್ ಮೋಸ ಹೋದ ವೈದ. ಅಪರಿಚಿತ ವ್ಯಕ್ತಿಯಿಂದ ಗೌತಮ್ ಮೊಬೈಲ್ ಗೆ ಒಂದು ಲಿಂಕ್ ಹಾಗೂ ಐಡಿಯನ್ನು ಕಳುಹಿಸಿ ಅದಕ್ಕೆ ಹಣ ಹಾಕಿ ಲಾಭ ಬರುತ್ತದೆ ಎಂದು ಸೂಚಿಸಿದ್ದೇನೆ. ಮೊದು ಹಣ ಹಾಕುತ್ತಿದ್ದಂತೆ ಲಾಭಾಂಶ ಬಂದಿದೆ. ಇದನ್ನು ನಂಬಿದ ಹಂತ ಹಂತವಾಗಿ ಒಟ್ಟು 15 ಲಕ್ಷ ಹಣ ಹಾಕಿದ್ದಾರೆ.
ಹಣವನ್ನು ವಾಪಸ್ ಕೊಡಲು ಹೇಳಿದಾಗ, ಇನ್ನಷ್ಟು ಹಣ ಹೂಡುವಂತೆ ಹೇಳಿದಾಗ ವಂಚನೆ ನಡೆದಿರುವುದಿ ಗೊತ್ತಾಗಿದೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.