ಡಿವಿಜಿ ಸುದ್ದಿ, ಹಳೇಬೀಡು: ನಾಡಿನ ಸಾಂಸ್ಕೃತಿಕ ಹಬ್ಬದಂತೆ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದ ನಾಲ್ಕನೇ ದಿನದಲ್ಲಿ ವಿಶೇಷ ಅತಿಥಿಗಳಾಗಿ ಬೆಂಗಳೂರು ಉತ್ತರ ವಲಯದ ಜಿಲ್ಲಾ ರಕ್ಷಣಾಧಿಕಾರಿ ರವಿ ಚನ್ನಣ್ಣನವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ಸಂಜೆ 6.30 ಕ್ಕೆ ಪ್ರಾರಂಭವಾಗಲಿದ್ದು, ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹಾಗೂ ಕಡೂರಿನ ಯಳನಡು ಮಹಾ ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಆರ್ಶಿವರ್ಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಸತಿ ಸಚಿವ ವಿ. ಸೋಮಣ್ಣ, ದಾವಣಗೆರೆ ವಿವಿ ಕುಲಪತಿ ಡಾ. ಶರಣಪ್ಪ ಹಲಸೆ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ ಭಾಗವಹಿಸಲಿದ್ದಾರೆ. ವಿಶೇಷ ಉಪನ್ಯಾಸದಲ್ಲಿ ತ್ತಿಭಾಷಾ ಕವಿ ಜಿನವಲ್ಲಭ ಕುರಿತು ಸಾಹಿತಿ ಡಾ. ಹಂಪ ನಾಗರಾಜಯ್ಯ, ಜಾನಪದ ನೆಲೆ ಸಂಸ್ಕೃತಿಯ ನೆಲೆ ಕುರಿತು ಜಾನಪದ ಸಾಹಿತಿ ಶಂಭು ವಿ. ಬಳಿಗಾರ್ , ನಮ್ಮ ಹೃದಯ ನಮ್ಮ ಕೈಯಲ್ಲಿ ಕುರಿತು ಹೃದಯರೋಗ ತಜ್ಞ ಡಾ. ಕೆ. ಎಸ್. ಶೋಮಶೇಖರ್ ಹಾಗೂ ಹೊಯ್ಸಳರ ಕಾಲದ ದೇವಾಲಯ ಮತ್ತು ಆಧ್ಯಾತ್ಮಿಕತೆ ಕುರಿತು ಡಾ. ಶ್ರೀವತ್ಸ ಎಸ್ ವಟಿ ಮಾತನಾಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಹಾಸನ ಶಾಸಕ ಪ್ರೀತಂ ಜಿ. ಗೌಡ, ಸಕಲೇಶಪುರ ಶಾಸಕ ಎಚ್.ಎಂ. ವಿಶ್ವಾನಾಥ್, ವಿಧಾನ ಪರಿಷತ್ ಶಾಸಕ ಕ.ಟಿ ಶ್ರೀಕಂಠೇಗೌಡ, ಬೇಲೂರಿನ ವೀರಶೈವ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಚಂದ್ರಶೇಖರ್, ಬೇಲೂರು ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಭಾಗವಹಿಸಲಿದ್ದಾರೆ.