ದಾವಣಗೆರೆ: ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆವರಗೊಳ್ಳ, ಬುಳ್ಳಾಪುರ, ವ್ಯಾಸಗೊಂಡನಹಳ್ಳಿ, ಗರಗ, ಬೇಲಿಮಲ್ಲೂರು, ಕಡರನಾಯಕನಹಳ್ಳಿ ಹಾಗೂ ಎಕ್ಕೆಗೊಂದಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ತಮ ತಳಿಯ ನಾಟಿಗೆ ಯೋಗ್ಯವಾದ ತೆಂಗು, ಅಡಿಕೆ ಸಸಿಗಳು ಲಭ್ಯವಿರುತ್ತದೆ.
ಆಸಕ್ತ ರೈತರು ಇಲಾಖೆ ನಿಗದಿಪಡಿಸಿದ ದರದಂತೆ ಮೇಲಿನ ಕ್ಷೇತ್ರಗಳಿಂದ ಸಸಿಗಳನ್ನು ಖರೀದಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂ.ಸಂ:9591771724, 9448581142, 8296357345 ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.