ಡಿವಿಜಿ ಸುದ್ದಿ, ದಾವಣಗೆರೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಜಾಥಾ ನಡೆಸಿ, ಸರ್ಕಾರಿ ನೌಕರರೆಂದು ಘೋಷಿಸುವಂತೆ ಮನವಿ ಮಾಡಿದರು. ಸಂಬಳ ನಿಗದಿ, ವರ್ಗಾವಣೆ, ಬಸ್ ಖರೀದಿ, ಪ್ರಯಾಣ ದರ ನಿಗದಿ ಸೇರಿದಂತೆ ರಸ್ತೆ ಸಾರಿಗೆ ಇಲಾಖೆ ಪ್ರತಿಯೊಂದು ನಿರ್ಧಾರವನ್ನು ಸರ್ಕಾವೇ ತಗೆದುಕೊಳ್ಳುತ್ತದೆ. ಆದರೆ, ನೌಕರನ್ನು ಮಾತ್ರ ಸರ್ಕಾರಿ ನೌಕರ ಎಂದು ಪರಿಗಣಿಸಿಲ್ಲ.

ಇನ್ನು ವೇತನ ಹೆಚ್ಚಳದಲ್ಲಿಯೂ ತಾರತಮ್ಯವಾಗಿದ್ದು, ಎಲ್ಲಾ ಸರ್ಕಾರಿ ನೌಕರಿಗೆ ಇರುವ ವೇತನಕ್ಕಿಂತ ಶೇ . 30 ರಷ್ಟು ಕಡಿಮೆ ವೇತನ ತಗೆದುಕೊಳ್ಳುತ್ತಿದ್ದೇವೆ. ಈ ಹಣದಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿದೆ. ನಮ್ಮ ಜಾಥಾದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾರದ ರಜೆ ಇರುವರು, ಶಿಫ್ಟ್ ಮುಗಿದವರು ಮಾತ್ರ ಭಾಗಿಯಾಗಿದ್ದೇವೆ. ಕಳೆದ ಮೂರು ವರ್ಷದಿಂದ ನಮ್ಮನ್ನು ಸರ್ಕಾರಿ ನೌಕರೆಂದು ಪರಿಗಣಿಸಿ ಎಂದು ಆಗ್ರಹಿಸುತ್ತಾ ಬಂದಿದ್ದರೂ, ಸರ್ಕಾರ ಗಮನ ಹರಿಸುತ್ತಿಲ್ಲ. ಹೀಗಾಗಿ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ನಮ್ಮನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು ಎಂದು ನಮವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



