ಡಿವಿಜಿ ಸುದ್ದಿ, ಬಾಗಲಕೋಟೆ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ, ನನ್ನನ್ನು ಸೋಲಿಸಿದರು. ಸಂಕಷ್ಟದ ಸಂದರ್ಭದಲ್ಲಿ ಬಾದಾಮಿ ಜನ ಕೈ ಹಿಡಿದ್ದು, ಅವರ ಋಣ ತೀರಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಬಾದಾಮಿ–ಕೆರೂರು ಪಟ್ಟಣಗಳು ಹಾಗೂ18 ಹಳ್ಳಿಗಳಿಗೆ 227.80 ಕೋಟಿ ವೆಚ್ಚದ ಆಲಮಟ್ಟಿ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ ನರವೇರಿಸಿ ಮಾತನಾಡಿದರು. ಇನ್ನೂ ಮೂರು ವರ್ಷ ಅವಧಿ ಇದ್ದು, ಈ ಅವಧಿಯಲ್ಲಿ ಏನೆಲ್ಲಾ ಕೆಲಸ ಮಾಡಲು ಸಾಧ್ಯವಿದೆಯೋ ಆ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ ಎಂದರು. ಆಗ ನೆರೆದಿದ್ದ ಸಭಿಕರು ‘ಹೌದು ಹುಲಿಯಾ’.. ಎಂದು ಕೂಗಿದರು.
ನನ್ನನ್ನು ಹಳೇ ಮೈಸೂರಿ ಕಡೆಯವರು ಎಂದು ತಿಳಿದುಕೊಳ್ಳಬೇಡಿ, ನಾನು ಈಗ ಉತ್ತರ ಕರ್ನಾಟಕದವನು. ಜೋಳದ ರೊಟ್ಟಿ, ಶೇಂಗಾ ಚಟ್ನಿ ತಿನ್ನುವುದನ್ನು ಚೆನ್ನಾಗಿ ಕಲಿತಿದ್ದೇನೆ ಎಂದ ಅವರು, ಅನ್ನಭಾಗ್ಯ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು. ರಾಜ್ಯದಲ್ಲಿ ನಾನು ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದರೆ ಅನ್ನಭಾಗ್ಯ ಯೋಜನೆಯ ಅಕ್ಕಿಯ ಪ್ರಮಾಣವನ್ನು 7 ಕೆ.ಜಿಯಿಂದ 10 ಕೆ.ಜಿಗೆ ಏರಿಕೆ ಮಾಡುತ್ತಿದ್ದೆ ಎಂದರು.



