ದಾವಣಗೆರೆ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ಇಲ್ಲಿ ಐಟಿಐ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಸಂಸ್ಥೆ ಎನ್‍ಸಿವಿಟಿ ಯಿಂದ ಸಂಯೋಜನೆ ಪಡೆದ ಎಲೆಕ್ಟ್ರೀಷಿಯನ್, ಫಿಟ್ಟರ್, ಎಂ.ಆರ್&ಎಸ್ಸಿ, ಎಂ.ಇ.ವಿ ಮತ್ತು ಅಡ್ವಾನ್ಸ್ ಸಿ ಎನ್ ಸಿ ವಿಭಾಗಕ್ಕೆ ಅರ್ಜಿ ಸಲ್ಲಿಸಬಹುದು.
ನೇರವಾಗಿ ಚನ್ನಗಿರಿ ಸರ್ಕಾರಿ ಐ.ಟಿ.ಐ ಕಾಲೇಜಿಗೆ ಭೇಟಿ ನೀಡಿ ಅಥವಾ ವೆಬ್ ಸೈಟ್ karnataka.gov.in ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ದ: 9844710844 ಮತ್ತು 9738782540 ಸಂಪರ್ಕಿಸಬಹುದೆಂದು ತರಬೇತಿ ಅಧಿಕಾರಿ ಮನೋಹರ್.ಹೆಚ್ ತಿಳಿಸಿದ್ದಾರೆ.



