ದಾವಣಗೆರೆ: ದಾವಣಗೆರೆ ಲೋಕಸಭೆಗೆ ಇಂದು (ಮೇ 6) ಮತದಾನ ನಡೆದಿದ್ದು, ಜಿಲ್ಲೆಯಲ್ಲಿ ಸರಾಸರಿ ಶೇ.77ರಷ್ಟು ಮತದಾನವಾಗಿದೆ. ಅಂತಿಮ ಹಂತದ ಅಂಕಿ ಅಂಶಗಳ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಅಣಕು ಮತದಾನ ನಂತರ 7 ಗಂಟೆಯಿಂದ ಸ್ವಲ್ಪ ಮಂದಗತಿಯಿಂದ ಆರಂಭವಾದ ಮತದಾನ 9 ಗಂಟೆಯವರೆಗೆ ಶೇ 9.13 ರಷ್ಟು ಮತದಾನವಾಗಿತ್ತು. ಇದು 11 ಗಂಟೆಯ ವೇಳೆಗೆ ಏರುಗತಿಯಲ್ಲಿ ಸಾಗಿ ಶೇ 23.77 ರಷ್ಟು ದಾಖಲಾಯಿತು. ಮಧ್ಯಾಹ್ನ ಬಿಸಿಲಿನಲ್ಲಿಯು ಸರತಿ ಸಾಲಿನಲ್ಲಿ ನಿಂತ ಜನರಿಂದ ಮತದಾನ ಚುರುಕುಗೊಂಡು ಮಧ್ಯಾಹ್ನ 1 ಗಂಟೆಗೆ ಮತದಾನ ಪ್ರಮಾಣ ಶೇ 42.27 ಕ್ಕೇರಿತು. ಮಧ್ಯಾಹ್ನ 3 ಗಂಟೆಗೆ 57.34 ರಷ್ಟು ದಾಖಲಿಸಿ ಸಂಜೆ 5 ಗಂಟೆಗೆ ಶೇ 70.94 ರಷ್ಟು ಮತದಾನವಾಗಿತ್ತು. ಅಂತಿಮ ಹಂತದ ಮತದಾನ ಪ್ರಮಾಣವನ್ನು ನಿರೀಕ್ಷಿಸಲಾಗಿದ್ದು 2019 ರ ಚುನಾವಣೆಯಲ್ಲಿ ದಾಖಲಾಗಿದ್ದ ಶೇ 72.96
ಕ್ಷೇತ್ರವಾರು ವಿವರ:
- ಜಗಳೂರು 77.23 ಶೇ.
- ಹರಪನಹಳ್ಳಿ 76.97 ಶೇ.
- ದಾವಣಗೆರೆ ಉತ್ತರ 69.60 ಶೇ.
- ದಾವಣಗೆರೆ ದಕ್ಷಿಣ 70.01ಶೇ.
- ಹರಿಹರ 79.45 ಶೇ.
- ಮಾಯಕೊಂಡ 82.96 ಶೇ
- ಚನ್ನಗಿರಿ 79.05 ಶೇ.
- ಹೊನ್ನಾಳಿ 81.90 ಶೇ.