ಡಿವಿಜಿ ಸುದ್ದಿ, ಹೊಳಲ್ಕೆರೆ: ರಾಜಪ್ಪ ಅನ್ನೋ ಅಕ್ಕಿ ವ್ಯಾಪಾರಿ, ಅಕ್ರಮವಾಗಿ ಸರ್ಕಾರಿ ಪಡಿತರ ಸಂಗ್ರಹಿಸಿ ಸರ್ಕಾರಕ್ಕೆ ವಂಚಿಸಿ ಮಾರಾಟ ಮಾಡುತ್ತಿದ್ದು, ಈ ಪ್ರಕರಣದಲ್ಲಿ ಅಧಿಕಾರಿ ವರ್ಗವೂ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಡಿಎಸ್ ಎಸ್ ಕಾರ್ಯಕರ್ತರು ಪಟ್ಟಣದ ಪೊಲೀಸ್ ಠಾಣೆ ಎದುರು ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ರಾಜಪ್ಪ ಹೆಸರಿಗಷ್ಟೇ ಅಕ್ಕಿ ವ್ಯಾಪರಿ. ಹೊಳಲ್ಕೆರೆ ಪಟ್ಟಣದಲ್ಲಿ ದೊಡ್ಡ ಗೋದಾಮು ತೆರೆದು, ಸರ್ಕಾರಿ ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾನೆ. ಈ ಕಳ ಸಂತೆಯಲ್ಲಿ ಹೊಳಲ್ಕೆರೆ ತಹಸೀಲ್ದಾರ್, ಆಹಾರ ನೀರೀಕ್ಷ ಸೇರಿದಂತೆ ಮತ್ತಿತರರು ಶಾಮೀಲಾಗಿದ್ದು, ಶಿವರಾಜ್ ಅನ್ನೋ ಯುವಕನ ಮೇಲೆ ಕೇಸ್ ದಾಖಲಿಸಿದ್ದಾರೆ. ಇದು ಖಂಡನೀಯ ಎಂದು ಆರೋಪಿಸಿದರು.

ಶುಕ್ರವಾರ ರಾತ್ರಿ ರಾಜಪ್ಪ, ಶಿವರಾಜ್ಎಂಬುವರ ವಾಹನವನ್ನು ಬಾಡಿಗೆ ಪಡೆದು 15 ಚೀಲ ಅಕ್ಕಿ ಸಾಗಿಸುವಂತೆ ಕೇಳಿಕೊಂಡಿದ್ದಾನೆ. ಅದರಂತೆ ಶಿವರಾಜ್ ಎಂಬ ಯುವಕ ಲಗೇಜು ಹಾಕಿಕೊಂಡು ಮಲಾಡಿಹಳ್ಳಿ ಬಳಿ ಹೋಗುವಾಗ ಅಕ್ಕಿ ಮೂಟೆ ಸಾಗಿಸುತ್ತಿದ್ದ ಶಿವರಾಜ ವಾಹನ ತಡೆದ ಪೋಲಿಸರು, ಕಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಎಂದು ಕೇಸು ದಾಖಲಿಸಿದ್ದಾರೆ. ಅಕ್ಕಿ ಮಾಲೀಕ ರಾಜಪ್ಪನನ್ನು ಬಿಟ್ಟು, ಶಿವರಾಜ್ ಎಂಬ ಯುವಕನ ಮೇಲೆ ಕೇಸ್ ದಾಖಲಿಸಲಾಗಿದೆ. ಇದನ್ನು ಖಂಡಿಸಿದ ಡಿಎಸ್ ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಸ್ಥಳಕ್ಕೆ ಆಗಮಿಸಿದ ಡಿವೈಎಸ್ ಪಿ ಪಾಂಡುರಂಗಪ್ಪ ಡಿಎಸ್ ಎಸ್ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯ್ಯಣ್ಣ ಅವರಲ್ಲಿ ಪ್ರತಿಭಟನೆ ಕೈ ಬಿಡುವಂತೆ ಆಗ್ರಹಿಸಿದರು. ಅಧಿಕಾರಿಗಳ ತಲೆ ದಂಡವಾಗುವವರೆಗೆ ಪ್ರತಿಭಟನೆ ಹಿಂದೆ ತೆಗಿಯುವುದಿಲ್ಲ. ಯಾವುದೇ ತಪ್ಪು ಮಾಡದ ಶಿವರಾಜ್ನನ್ನು ತಕ್ಷಣ ಬಿಡಬೇಕು. ಲೋಪ ಎಸಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಲಕಾಲ ಪೋಲೀಸರ ಜೊತೆ ಮಾತಿನ ಚಕಮುಕಿ ನಡೆಯಿತು ನಂತರ ಡಿವೈಎಸ್ ಪಿ ಪಾಂಡುರಂಗಪ್ಪ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.
ದಿವಾಕರ್ , ಪ್ರಸನ್ನ ದಾಸಿಕಟ್ಟೆ , ನವೀನ ಮದ್ದೇರ , ತಿಪ್ಪೇಸ್ವಮಿ .ಕಸ್ತೂರಪ್ಪ ,ರುದ್ರಪ್ಪ , ಕರಿಯಪ್ಪ ,ಶಿವಣ್ಣ . ಮಂಜುನಾಥ . ರಾಜಪ್ಪ ,ರುದ್ರೇಶ್ ,ವಿಜಯ್ ಕುಮಾರ್ , ನವೀನ್ ಪವರ್) ಸೇರಿದಂತೆ ನೂರಾರು ದಸಂಸ ಕರ‍್ಯರ‍್ತರು ಉಪಸ್ಥಿತರಿದ್ದರು .



