ಹರಿಹರ: ಸಂಸದರು ಗುಟ್ಕಾ ತಯಾರಿಸುವ ಕಾರ್ಖಾನೆಯಿಂದ ಜನ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಂಥವರನ್ನು ಚಿಕಿತ್ಸೆ ನೀಡಲು ಡಾ.ಪ್ರಭಾ ಬರುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಿಂತ ಸ್ವಯಂ ಅಭಿವೃದ್ಧಿ ಹೊಂದಿರುವ ಸಂಸದ ಜಿ.ಎಂ ಸಿದ್ದೇಶ್ವರಗೆ ಕ್ಷೇತ್ರದ ಕುರಿತು ಆಳ- ಅಗಲ ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಿಡಿಕಾರಿದರು.
ತಾಲ್ಲೂಕಿನ ಮಲೇಬೆನ್ನೂರಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ತಮ್ಮ ಪತ್ನಿ ಡಾ.ಪ್ರಭಾ ಪರವಾಗಿ ಮತಯಾಚಬೆ ಮಾತನಾಡಿದರು. ಕಾಂಗ್ರೆಸ್ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ನಮ್ಮ ಅಭ್ಯರ್ಥಿಗೆ ಮತ ಹಾಕಿ ಎಂದರು.
ಉದ್ಯಮಿ ಬಿ.ಎಂ. ವಾಗೀಶ್ ಸ್ವಾಮಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಮಾಜಿ ಶಾಸಕ ಎಸ್. ರಾಮಪ್ಪ,ಮಾಜಿ ಶಾಸಕಿ ಜಲಜಾನಾಯ್ಕ, ಎಚ್.ಎಸ್. ನಾಗರಾಜ್, ಡಾ.ಚಂದ್ರಶೇಖರ್, ಪುರಸಭಾ ಸದಸ್ಯ ನಯಾಜ್, ಶ್ರೀಕಾಂತ್ ಪಾಲ್ಗೊಂಡಿದ್ದರು.