Connect with us

Dvgsuddi Kannada | online news portal | Kannada news online

ದಾವಣಗೆರೆ: ಏ.28ರಂದು ಶ್ರೀ ಶಿವನಾರದಮುನಿ ಸ್ವಾಮಿ ರಥೋತ್ಸವ

IMG 20240420 185800

ದಾವಣಗೆರೆ

ದಾವಣಗೆರೆ: ಏ.28ರಂದು ಶ್ರೀ ಶಿವನಾರದಮುನಿ ಸ್ವಾಮಿ ರಥೋತ್ಸವ

ಹರಪನಹಳ್ಳಿ: ತಾಲ್ಲೂಕಿನ ಚಿಗಟೇರಿ ಗ್ರಾಮದ ಶ್ರೀ ಶಿವನಾರದಮುನಿ ರಥೋತ್ಸವವು ಏ.28 ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ನಾರದಮುನಿ ಸ್ವಾಮಿ ಸೇವಾ ಟ್ರಸಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದ್ದಾರೆ.

ಜಾತ್ರೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏ.28ರ ಭಾನುವಾರ ಸಂಜೆ 5 ರಿಂದ 6 ರವರೆಗಿನ ಮೂಲಾ ನಕ್ಷತ್ರದಲ್ಲಿ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ .
ಸದರಿ ದೇವಸ್ಥಾನದ ಎಲ್ಲಾ ಭಕ್ತಾದಿಗಳು ರಥೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಥೋತ್ಸವ ಯಶಸ್ವಿಗೊಳಿಸಬೇಕೆಂದರು.

ಏ.29ರ ಸೋಮವಾರ ಸಂಜೆ 5.30ಕ್ಕೆ ಓಕಳಿ ಕಾರ್ಯಕ್ರಮ ಜರುಗಲಿದೆ.ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಜಿ.ವಿ.ಆರ್.ಪ್ರಸಾದ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿಗಳು, ದೇವಸ್ಥಾನ ಸಮಿತಿ ಸದಸ್ಯ ವಡ್ಡಿನಹಳ್ಳಿ ಷಡಕಣ್ಣ ಶಾಮನೂರು ಬಸಣ್ಣ ಕಲಪನಹಳ್ಳಿ ಬಸವಲಿಂಗಪ್ಪ, ಹೊಳಲ್ಕೆರೆ ವೇದಮೂರ್ತಿ, ಹುಣಸಿಹಳ್ಳಿ ಜಾತಪ್ಪ ಇಂಜಿನಿಯರ್ ಸುರೇಶ್, ಪಲ್ಲಾಗಟ್ಟೆ ನಾಗರಾಜ್, ಅಸಗೋಡು ಅಶೋಕ್, ವಡ್ಡಿನಹಳ್ಳಿ ಮರುಳಸಿದ್ದಪ್ಪ ಮತ್ತು ಸ್ಥಳೀಯ ಮುಖಂಡರಾದ ದ್ಯಾಮನಗೌಡ್ರು, ರಾಜಣ್ಣ ಹಾಲಪ್ಪ, ಬಸವನಗೌಡ್ರು, ಜಯ್ಯನಗೌಡ್ರು ಮತ್ತು ದೇವಸ್ಥಾನದ ಅರ್ಚಕರು ಸೇರಿದಂತೆ ಅನೇಕ ಜನ ಭಕ್ತಾಧಿಗಳು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top