ದಾವಣಗೆರೆ: ಅನಧಿಕೃತವಾಗಿ ವಾಹನಗಳಿಗೆ ಗ್ಯಾಸ್ ಸಿಲಿಂಡರ್ ತುಂಬಿಸುವಾಗ ಓಮಿನಿ ಕಾರು ಬ್ಲಾಸ್ಟ್ ಆದ ಘಟನೆ ದಾವಣಗೆರೆ ಹೊರ ವಲಯದ ದೊಡ್ಡಬೂದಿಹಾಳ್ ಗ್ರಾಮದಲ್ಲಿ ನಡೆದಿದೆ. ಭಾರೀ ಶಬ್ದಕ್ಕೆ ಜನರು ಆತಂಕಗೊಂಡು ಮನೆಯಿಂದ ಹೊರ ಬಂದ ಘಟನೆ ನಡೆದಿದೆ.
ಈ ಪ್ರದೇಶ ಜನನಿಬಿಡ ಪ್ರದೇಶವಾಗಿದ್ದು, ಇಲ್ಲಿ ಅನಧಿಕೃತವಾಗಿ ಕೆಲ ದಿನಗಳಿಂದ ಓಮಿನಿ ಹಾಗೂ ಆಟೋಗಳಿಗೆ ಎಲ್ಪಿಜಿ ಗ್ಯಾಸ್ ತುಂಬಲಾಗುತ್ತಿತ್ತು. ಈಗ ಸಿಲಿಂಡರ್ನಲ್ಲಿ ಲೀಕೇಜ್ ಆಗಿ ಭಾರಿ ಸ್ಫೋಟ ಸಂಭವಿಸಿದೆ. ಇನ್ನು ಬೆಂಕಿ ಹೆಚ್ಚಾಗುತ್ತಿದ್ದಂತೆ ಬಾಂಬ್ ರೀತಿ ಓಮಿನಿ ಕಾರು ಸಿಡಿದಿದೆ. ಸ್ಫೋಟದ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಘಟನೆ ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.