ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್, 56.21 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಿದ ನಾಮಪತ್ರದಲ್ಲಿ ಈ ಆಸ್ತಿ ವಿವರದ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಚರಾಸ್ತಿ 9.07 ಕೋಟಿ ರೂ, ಸ್ಥಿರಾಸ್ತಿ 47.14 ಕೋಟಿ ರೂ. ಇದೆ. ಕೈಯಲ್ಲಿರುವ ನಗದು 1.75 ಲಕ್ಷ ರೂ, ಬ್ಯಾಂಕ್ ಸೇರಿ ಹಲವು ಸಂಸ್ಥೆಗಳಲ್ಲಿ ಇರಿಸಿರುವ ಠೇವಣಿ 4.20 ಕೋಟಿ ರೂ.
ಅವರು 92.50 ಎಕರೆ ಜಮೀನಿಗೆ ಮಾಲೀಕರಾಗಿದ್ದು, ಅದರ ಮೌಲ್ಯ 14.41 ಕೋಟಿ ರೂ. ಆಗಿದೆ. ಬ್ಯಾಂಕ್ ಮತ್ತಿತರೆ ಸಂಸ್ಥೆಗಳಿಂದ 9.58 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ. ಜಿ.ಎಸ್.ಟಿ., ಪಾಲಿಕೆ ತೆರಿಗೆ ಸೇರಿ ಒಟ್ಟಾರೆ ಸರ್ಕಾರಕ್ಕೆ 1.31 ಕೋಟಿ ರೂ.ಗಳ ಪಾವತಿ ಬಾಕಿ ಇದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.