ದಾವಣಗೆರೆ: ಮೂವರು ಪ್ಲಂಬಿಂಗ್ ವರ್ಕರ್ ಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ, ಬರೋಬ್ಬರಿ 12.15 ಲಕ್ಷ ವಂಚನೆ ಮಾಡಿದ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ಲಂಬಿಂಗ್ ಕೆಲಸಗಾರರಾದ ಮಲ್ಲಿಕಾರ್ಜುನ್ ಸಿ., ತಿಪ್ಪಣ್ಣ ಹಾಗೂ ರವಿ ಮೋಸ ಹೋದವರು. ಶಾಮನೂರು ರಸ್ತೆಯ ಶ್ರೀ ಸರ್ವೇಶ್ವರ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ನ ಸಂಸ್ಥಾಪಕ ಅಧ್ಯಕ್ಷ ಕಲ್ಮೇಶ್ ವೈ.ಅಗಸಿಮನ, ಅವರ ಪತ್ನಿ ಸರಸ್ವತಿ ಹಾಗೂ ಬ್ಯಾಂಕ್ನ ಮ್ಯಾನೇಜರ್ ಮಂಜುನಾಥ ನಾಯ್ಕ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ನಮ್ಮ ಬ್ಯಾಂಕ್ ನಲ್ಲಿ ಪ್ರತಿಯೊಬ್ಬರು 4.05 ಲಕ್ಷ ಷೇರು ನೀಡಿದರೆ 15 ಲಕ್ಷದಿಂದ 20 ಲಕ್ಷದವರೆಗೂ ಸಾಲ ನೀಡುತ್ತೇವೆ ಎಂದು ಪ್ಲಂಬಿಂಗ್ ವರ್ಕರ್ ಗಳನ್ನು ನಂಬಿಸಿ, ತಲಾ 4.05 ಲಕ್ಷದಂತೆ ಒಟ್ಟು 12.15 ಲಕ್ಷವನ್ನು ತೆಗೆದುಕೊಂಡಿದ್ದಾರೆ. ಸಾಲ ಕೊಡುತ್ತಿಲ್ಲ. ನಮಗೆ ಸಾಲ ಬೇಡ, ಕಟ್ಟಿರುವ ಷೇರು ಹಣವನ್ನಾದರೂ ಬೆದರಿಕೆಯೊಡ್ಡಿದರು ಎಂದು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



