ದಾವಣಗೆರೆ: ಮಾವನಿಗೆ ಬಿಸಿನೀರು, ಕಾರದ ಪುಡಿ ಎರಚಿ, ವೇಲ್‌ನಿಂದ ಬಿಗಿದು, ಒನಕೆಯಿಂದ ತಲೆ ಹೊಡೆದು ಕೊಲೆ ಮಾಡಿದ್ದ ಸೊಸೆ ಅಪರಾಧಿ ಎಂದು ಸಾಬೀತಾಗಿದ್ದು, 4 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಹರಿಹರದ ವಿದ್ಯಾನಗರ 4ನೇ ತಿರುವು, 3ನೇ ಮುಖ್ಯ ರಸ್ತೆ ನಿವಾಸಿ ಜ್ಯೋತಿ (32) ಅಪರಾಧಿ. ಜ್ಯೋತಿ ಅವರನ್ನು ವಿದ್ಯಾನಗರದ ವೀರೇಶ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಬಟ್ಟೆ ತೊಳೆಯುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳ ವಿಚಾರವಾಗಿ ವೀರೇಶನ ತಂದೆ ಶಿವಕುಮಾರ (70) ಹಾಗೂ ಜ್ಯೋತಿ ಮಧ್ಯೆ ವೈಮನಸ್ಸು ಇತ್ತು. ಮಾವ ತನ್ನನ್ನು ಕೆಟ್ಟದೃಷ್ಟಿಯಿಂದ
ನೋಡುತ್ತಾನೆಂದು ಪದೇಪದೆ ಮನೆಯಲ್ಲಿ ಗಂಡ ವೀರೇಶನ ಜೊತೆಗೆ ಜಗಳವಾಡುತ್ತಿದ್ದಳು.
2022ರ ನ.4ರಂದು ಬೆಳಗ್ಗೆ 11.30ರ ವೇಳೆ ವೃದ್ಧ ಶಿವಕುಮಾರ ಮಲಗಿದ್ದರು. ಆಗ ಸೊಸೆ ಜ್ಯೋತಿ ಮಾವನ ಮೇಲೆ ಬಿಸಿನೀರು,
ಕಾರದ ಪುಡಿ ಎರಚಿ, ವೇಲ್‌ನಿಂದ ಕುತ್ತಿಗೆಗೆ ಬಿಗಿದು, ಒನಕೆಯಿಂದ ತಲೆಯ ಹಿಂಭಾಗಕ್ಕ ಹೊಡೆದು, ಕೊಂದಿದ್ದಳು. ತಂದೆ ಕೊಲೆ ಬಗ್ಗೆ ಪುತ್ರ ವೀರೇಶ್ ತನ್ನ ಪತ್ನಿ ಜ್ಯೋತಿ ವಿರುದ್ಧ
ದೂರು ನೀಡಿದ್ದರು. ಪ್ರಕರಣ ತನಿಖಾಧಿಕಾರಿಯು ಸತೀಶಕುಮಾರ ನೇತೃತ್ವದಲ್ಲಿ ಪೊಲೀಸರು ಹಂತಕಿ ಜ್ಯೋತಿಯನ್ನು ಬಂಧಿಸಿ, ಆಕೆಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶ ಜೆ.ವಿ.ವಿಜಯಾನಂದ ಪ್ರಕರಣದ ವಿಚಾರಣೆ ನಡೆಸಿದ್ದರು. ಜ್ಯೋತಿಯನ್ನು
ಅಪರಾಧಿ ಎಂದು ತೀರ್ಮಾನಿಸಿ, 4 ವರ್ಷಗಳ
ಸಾಧಾರಣ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ
ವಿಧಿಸಿದರು.
ದೂರು ದಾರರ ಪರ ಸರ್ಕಾರಿ ವಕೀಲ ಕೆ.ಎಸ್.ಸತೀಶಕುಮಾರ ವಾದ ಮಂಡಿಸಿದ್ದರು. ತನಿಖಾಧಿಕಾರಿ. ಪೊಲೀಸ್ ನಿರೀಕ್ಷಕ ಯು.
ಸತೀಶಕುಮಾರ ಹಾಗೂ ಸಿಬ್ಬಂದಿ, ಪಿರ್ಯಾದಿ ಪರ ವಾದ ಮಂಡಿಸಿದ ಸರ್ಕಾರಿ ವಕೀಲ ಯು. ಸತೀಶಕುಮಾರ ಹಾಗೂ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ
ಎಂ.ಸ೦ತೋಷ, ಜಿ.ಮಂಜುನಾಥ ಶ್ಲಾಘಿಸಿದ್ದಾರೆ.



