ಡಿವಿಜಿ ಸುದ್ದಿ, ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಬೆಲೆ ಏರಿಕೆ ಮಾಡಿದೆ.
ಹೊಸ ದರ ಫೆಬ್ರವರಿ 1 ರಿಂದ ಜಾರಿಯಾಗಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಇದರೊಂದಿಗೆ 2 ರೂ. ದರ ಏರಿಕೆಯಿಂದ ಬರುವ ಹಣದಲ್ಲಿ 1 ರೂಪಾಯಿಯನ್ನು ರೈತರಿಗೆ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಮೂಲಕ ರಾಜ್ಯದ ರೈತರಿಗೆ ಸಿಹಿ ಕೊಟ್ಟರೆ, ಗ್ರಾಹಕರಿಗೆ ಹೆಚ್ಚುವರಿಯಾಗಿ 2 ರೂಪಾಯಿ ಹೊರೆ ನೀಡುವ ಮೂಲಕ ಕಹಿ ನೀಡಿದಂತಾಗಿದೆ.

2 ರೂಪಾಯಿಯಲ್ಲಿ 1 ರೂಪಾಯಿ ರೈತರಿಗೆ ಕೊಟ್ಟು, ಉಳಿದ ಒಂದು ರೂ. ಅನ್ನು ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ದರ ಏರಿಕೆಯಿಂದ ಲಭಿಸಿದ 1 ರೂಪಾಯಿಯಲ್ಲಿ 40 ಪೈಸೆ ಹಸುಗಳಿಗೆ ಇನ್ಶುರೆನ್ಸ್, 40 ಪೈಸೆ ಹಾಲು ಮಾರಾಟಗಾರರ ಏಜೆಂಟ್‍ಗಳಿಗೆ ಕಮಿಷನ್ ಮತ್ತು ಉಳಿದ 20 ಪೈಸೆ ಒಕ್ಕೂಟಗಳ ಸೆಕ್ರೇಟರಿಗಳಿಗೆ ಕಮಿಷನ್ ನೀಡಲು ಕೆ.ಎಂ.ಎಫ್ ನಿರ್ಧಾರ ಮಾಡಿದೆ.ಬೆಲೆ ಏರಿಕೆ ವಿಚಾರವಾಗಿ ಕೆ.ಎಂ.ಎಫ್ ಇತ್ತೀಚೆಗೆ ಸಭೆ ನಡೆಸಿದ್ದು, ಸಭೆಯಲ್ಲಿ 3 ರೂಪಾಯಿ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ 2 ರೂಪಾಯಿ ಏರಿಕೆ ಮಾಡಿದೆ.



