ದಾವಣಗೆರೆ: ಸಾಲಬಾಧೆಯಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಚನ್ನಗಿರಿ ತಾಲೂಕು ನವಿಲೇಹಾಳು ಗ್ರಾಮದ ರೈತನೊಬ್ಬ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ನವಿಲೇಹಾಳು ನಾರಪ್ಪ (32)ಆತ್ಮಹತ್ಯೆ ಮಾಡಿಕೊಂಡ ರೈತ, ಮಳೆ ಇಲ್ಲದೇ, ಬೆಳೆಗಳು ಒಣಗಿದ್ದರಿಂದ ಮನನೊಂದಿದ್ದ ನಾರಪ್ಪ, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಾರಪ್ಪ ಕೃಷಿಗಾಗಿ ಬ್ಯಾಂಕ್, ಕೈಗಡ ಸಾಲ ಮಾಡಿಕೊಂದ್ದರು. ಮೃತನ ಸಂಬಂಧಿ ನೀಡಿದ ದೂರಿನ ಮೇರೆಗೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



